ADVERTISEMENT

ತುರುವೇಕೆರೆ: 6ಕ್ಕೆ ಬೇಟೆರಾಯಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 4:38 IST
Last Updated 3 ಮಾರ್ಚ್ 2023, 4:38 IST
ಬೇಟೆರಾಯಸ್ವಾಮಿ
ಬೇಟೆರಾಯಸ್ವಾಮಿ   

ತುರುವೇಕೆರೆ: ಪಟ್ಟಣದ ಇತಿಹಾಸ ಪ್ರಸಿದ್ಧ ಬೇಟೆರಾಯಸ್ವಾಮಿ ಬ್ರಹ್ಮ ರಥೋತ್ಸವವು ಮಾರ್ಚ್ 6ರಂದು ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿ ಸಮಿತಿ ತಿಳಿಸಿದೆ.

ರಥೋತ್ಸವದ ಅಂಗವಾಗಿ ಪ್ರಾತಃಕಾಲ ಅಭಿಷೇಕ, ಗಣಪತಿ ಪೂಜೆ, ಅಂಕುರಾರ್ಪಣೆ, ಗರುಡ ಪಟ ಸೇವೆ ಹಾಗು ಧ್ವಜಾರೋಹಣ, ಹರಿವಾಣ ಸೇವೆ, ಶೇಷ ವಾಹನೋತ್ಸವ ನಡೆಯಲಿದೆ.

ಮಾರ್ಚ್ 3ರಂದು ರಾತ್ರಿ ದೊಡ್ಡ ಗರುಡೋತ್ಸವ, 4ರಂದು ಗಜೇಂದ್ರ ಮೋಕ್ಷ, 5ರಂದು ಅನ್ನ ಸಂತರ್ಪಣೆ ಮತ್ತು ಗೋಗ್ರಾಸ, ರಾತ್ರಿ ಕಲ್ಯಾಣೋತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.‌

ADVERTISEMENT

6ರಂದು ಬ್ರಹ್ಮ ರಥೋತ್ಸವ, ವಸಂತ ಪೂಜೆ, ರಥಾವರೋಹಣ ನಡೆಯಲಿದೆ.

7ರಂದು ಉಯ್ಯಾಲೋತ್ಸವ, ಚಿತ್ರ ಚಾವಡಿ ಸೇವೆ, ಶಯನೋತ್ಸವ, 9ರಂದು ಉಪ್ಪರಿಗೆ ವಾಹನೋತ್ಸವ, ವೈಕುಂಠೋತ್ಸವ, 10ರಂದು ಕೀಲುಕುದುರೆ ಉತ್ಸವ ಇದೆ.

11ರಂದು ಚಂಪಕೋತ್ಸವ ಹಾಗೂ 12ರಂದು ಪಲ್ಲಕ್ಕಿ ಉತ್ಸವ ಮತ್ತು ವಿಜಯೋತ್ಸವ
ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.