ADVERTISEMENT

ಸದಾ ಸಾತ್ವಿಕ ಚಿಂತನೆ ಇರಲಿ: ಎಂ.ಬಿ.ಭಾನುಪ್ರಕಾಶ್‌

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 13:29 IST
Last Updated 9 ಅಕ್ಟೋಬರ್ 2018, 13:29 IST
ಕಾರ್ಯಕ್ರಮ ಉದ್ಘಾಟನೆಯಲ್ಲಿ ಎಂ.ಬಿ.ಭಾನುಪ್ರಕಾಶ್, ರಮೇಶ್, ನಾಗರಾಜರಾವ್ ಇದ್ದರು
ಕಾರ್ಯಕ್ರಮ ಉದ್ಘಾಟನೆಯಲ್ಲಿ ಎಂ.ಬಿ.ಭಾನುಪ್ರಕಾಶ್, ರಮೇಶ್, ನಾಗರಾಜರಾವ್ ಇದ್ದರು   

ತುಮಕೂರು: ‘ನಿತ್ಯ ಉತ್ತಮ ಆಲೋಚನೆ ಮಾಡಿದರೆ ಅದು ಸಂಸ್ಕಾರವಾಗುತ್ತದೆ. ಯಾವಾಗಲು ಸಾತ್ವಿಕ ಚಿಂತನೆ ಮಾಡಬೇಕು. ಇದರಿಂದ ಸದಾ ಕಾಲ ಆನಂದ ಅನುಭವಿಸಬಹುದು’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್‌ ನುಡಿದರು.

ಜಿಲ್ಲಾ ಬ್ರಾಹ್ಮಣ ಸಭಾ ಇತ್ತೀಚೆಗೆ ಶೃಂಗೇರಿ ಶಂಕರ ಮಠದಲ್ಲಿ ಸಂಘಟನೆ ಸ್ವಾವಲಂಬನೆ ಸಂಸ್ಕಾರ ವಿಚಾರವಾಗಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಅವಕಾಶ ವಂಚಿತರನ್ನು ಸಮಾಜದಲ್ಲಿ ಮುಂದೆ ತರುವ ಕೆಲಸ ಸಂಘಟನೆಗಳಿಂದ ಆಗಬೇಕು. ಸಂಘಟನೆಗಳಿಗೆ ತಾತ್ಕಾಲಿಕ ಉದ್ದೇಶಗಳು ಇರಬಾರದು’ ಎಂದರು.

ADVERTISEMENT

‘ನಾವು ಯಾರೊಂದಿಗೂ ಪ್ರತಿಸ್ಪರ್ಧಿಗಳಲ್ಲ. ರಾಜಕೀಯ ಹೊರತುಪಡಿಸಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ವೇ ಜನಾಃ ಸುಖಿನೋಭವಂತು ಎನ್ನುವುದನ್ನು ಸದಾ ಜಪಿಸಬೇಕು. ಇಂತಹ ಕಾರ್ಯಕ್ರಮಗಳನ್ನು ಜಿಲ್ಲಾ ಬ್ರಾಹ್ಮಣ ಸಭಾ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾದುದು’ ಎಂದು ಹೇಳಿದರು.

ಇದೇ ವೇಳೆ ಪಾಲಿಕೆ ಸದಸ್ಯರಾದ ಸಿ.ಎನ್.ರಮೇಶ್, ಮಧುಗಿರಿ ಪುರಸಭಾ ಸದಸ್ಯ ಕೆ.ನಾರಾಯಣ ಹಾಗೂ ಎಂ.ಬಿ.ಭಾನುಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.

ಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ನಾಗರಾಜರಾವ್, ‘ಬ್ರಾಹ್ಮಣರು ರಾಜಕೀಯವಾಗಿ ಮುಖ್ಯವಾಹಿನಿಗೆ ಬರಬೇಕು’ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.