ADVERTISEMENT

ಸರ್ಕಾರಿ ಬಸ್ ಚಲಾಯಿಸಿದ ಶಾಸಕ!

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 14:47 IST
Last Updated 9 ಫೆಬ್ರುವರಿ 2020, 14:47 IST
ತುರುವೇಕೆರೆ ನಿಲ್ಲಾಣದಲ್ಲಿ ಬಸ್‌ ಸಂಚಾರಕ್ಕೆ ಚಾಲನೆ ನೀಡಿದ ಶಾಸಕ ಮಸಾಲ ಜಯರಾಮ್.
ತುರುವೇಕೆರೆ ನಿಲ್ಲಾಣದಲ್ಲಿ ಬಸ್‌ ಸಂಚಾರಕ್ಕೆ ಚಾಲನೆ ನೀಡಿದ ಶಾಸಕ ಮಸಾಲ ಜಯರಾಮ್.   

ತುರುವೇಕೆರೆ: ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ಶಾಸಕ ಮಸಾಲ ಜಯರಾಮ್ ಎರಡು ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿದರು.

ಈ ವೇಳೆ ತಾವೇ ಕೆಎಸ್‌ಆರ್‌ಟಿಸಿ ಬಸ್ ಅನ್ನು ಓಡಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಿಬ್ಬಂದಿ ಹೊರತು ಪಡಿಸಿ ಅನ್ಯರು ಬಸ್ ಚಾಲನೆ ಮಾಡುವುದು ಇಲಾಖೆಯ ನಿಯಮದಂತೆ ಪ್ರಮಾದ ಆಗುತ್ತದೆ.

ದಬ್ಬೇಘಟ್ಟ ರಸ್ತೆಯಲ್ಲಿನ ನಿಲ್ದಾಣದಲ್ಲಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಶಾಸಕರು ಪಕ್ಷದ ಕಾರ್ಯಕರ್ತರ ಒತ್ತಾಯದ ಮೇರೆಗೆ ನಿಲ್ದಾಣದ ಆವರಣದಲ್ಲಿಯೇ ಬಸ್ ಓಡಿಸಿದ್ದಾರೆ. ಬೆಂಬಲಿಗರು ಚಪ್ಪಾಳೆ ತಟ್ಟಿದ್ದಾರೆ.

ADVERTISEMENT

ಎಪಿಎಂಸಿ ನಿರ್ದೇಶಕ ವಿ.ಟಿ.ವೆಂಕಟರಾಮ್, ಕಾಳಂಜಿಹಳ್ಳಿ ಸೋಮಣ್ಣ, ನಾಗಲಾಪುರ ಮಂಜಣ್ಣ, ತಿಮ್ಮೇಗೌಡ, ಡಿಪೊ ವ್ಯವಸ್ಥಾಪಕರು ಹಾಗು ಸಾರಿಗೆ ಇಲಾಖೆ ಸಿಬ್ಬಂದಿಗಳು ಇದ್ದರು.

ಈ ಬಗ್ಗೆ ಮಾಹಿತಿ ಕೇಳಲು ತುರುವೇಕೆರೆ ಬಸ್ ಡಿಪೊ ವ್ಯವಸ್ಥಾಪಕರಿಗೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಸ್‌ಗಳನ್ನು ಯಾವ ಮಾರ್ಗಕ್ಕೆ ಬಿಡುತ್ತಾರೆ ಎಂಬ ಮಾಹಿತಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.