ADVERTISEMENT

ಆಲಂಕಾರಿಕ ವಸ್ತುಗಳ ಖರೀದಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 3:41 IST
Last Updated 14 ಜನವರಿ 2021, 3:41 IST
ಜಾನುವಾರುಗಳ ಆಲಂಕಾರಿಕ ವಸ್ತುಗಳ ಖರೀದಿ ನಿರತ ಜನರು
ಜಾನುವಾರುಗಳ ಆಲಂಕಾರಿಕ ವಸ್ತುಗಳ ಖರೀದಿ ನಿರತ ಜನರು   

ಹುಲಿಯೂರುದುರ್ಗ: ಸಂಕ್ರಾಂತಿಯು ಜಾನುವಾರುಗಳನ್ನು ಪೂಜಿಸುವ ಹಬ್ಬವಾಗಿ ಹೆಚ್ಚು ಪ್ರಚಲಿತವಾಗಿದೆ. ಸುಗ್ಗಿಯ
ಹಬ್ಬವಾಗಿಯೂ ಕೃಷಿಕರು ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಹಬ್ಬದ ಮುನ್ನಾ ದಿನವಾದ ಬುಧವಾರ ಜನರ ಸಡಗರ ಪಟ್ಟಣದ ಅಂಗಡಿಗಳ ಮುಂದೆ ಹೆಚ್ಚಾಗಿಕಂಡುಬಂತು. ತರಕಾರಿ, ಹಣ್ಣು ಹಂಪಲು, ಜಾನುವಾರುಗಳ ಅಲಂಕಾರಿಕ ವಸ್ತುಗಳ ಮಾರಾಟಗಾರರು ಹೆಚ್ಚಿನ ವ್ಯವಹಾರ ನಡೆಸಿದರು.

ಅವರೆ, ಗೆಣಸು, ಹಸಿ ನೆಲಗಡಲೆ, ಹಣ್ಣು, ಹೂ ತರಕಾರಿಗಳು ಹೆಚ್ಚಿನ ಬೆಲೆ ಪಡೆದುಕೊಂಡವು.

ADVERTISEMENT

ದನ ಕರುಗಳ ಕಿಚ್ಚು ಹಾಯಿಸುವ ಸಂಭ್ರಮದ ಆಚರಣೆಗಾಗಿ ಆಲಂಕಾರಿಕ ವಸ್ತುಗಳ ಮಾರಾಟಕ್ಕೆಂದೇ‌ ಹತ್ತು ಹಲವು ಅಂಗಡಿಗಳು ಹೊಸದಾಗಿ ತೆರೆದುಕೊಂಡಿದ್ದವು.

ಗೊಂಡೆ ಹೂ, ಮಣಿಸರ, ಬಣ್ಣಗಳ ಟೇಪುಗಳು, ಬಲೂನುಗಳು, ಕೊಂಬಿನ ಕಳಶ, ಕೊರಳಿನ ಕರಿಹುರಿ, ಚಿಕ್ಕ ಚಿಕ್ಕ ಗಂಟೆಗಳ ಬೆಲ್ಟ್, ಕೆಂಪು- ನೀಲಿ ವಾರ್ನಿಷ್, ಚಿನ್ನಾರಿ, ಗುಲಾಂಪಟ್ಟೆ, ಹೊಸ ಹಗ್ಗ, ಮೂಗುದಾರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.