ADVERTISEMENT

ತುಮಕೂರು: ಡಿ. 27ರಂದು ಶಿರಾ, ಮಧುಗಿರಿಯಲ್ಲಿ ಉಪಚುನಾವಣೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2023, 5:20 IST
Last Updated 6 ಡಿಸೆಂಬರ್ 2023, 5:20 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

(ಪ್ರಾತಿನಿಧಿಕ ಚಿತ್ರ)

ತುಮಕೂರು: ಶಿರಾ ನಗರಸಭೆಯ 9ನೇ ವಾರ್ಡ್ ಹಾಗೂ ಮಧುಗಿರಿ ಪುರಸಭೆಯ 13ನೇ ವಾರ್ಡ್‌ಗೆ ಡಿ. 27ರಂದು ಉಪಚುನಾವಣೆ ನಿಗದಿಯಾಗಿದೆ.

ADVERTISEMENT

ಡಿ. 8ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಡಿ.15 ಕೊನೆಯ ದಿನವಾಗಿರುತ್ತದೆ. ಡಿ. 16ರಂದು ನಾಮಪತ್ರಗಳ ಪರಿಶೀಲನೆ, ಡಿ.18 ಉಪಮೇದುವಾರಿಕೆ ವಾಪಸ್‌ಗೆ ಕಡೆಯ ದಿನವಾಗಿದೆ. ಡಿ. 27ರಂದು ಮತದಾನ, ಡಿ. 30ರಂದು ಮತಗಳ ಎಣಿಕೆ ನಡೆಯಲಿದೆ.

ಚುನಾವಣೆ ನಡೆಯುವ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಡಿ. 8ರಿಂದ ನೀತಿಸಂಹಿತೆ ಜಾರಿಯಾಗಲಿದ್ದು, ಡಿ.30ರ ವರೆಗೆ ಜಾರಿಯಲ್ಲಿ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.