ADVERTISEMENT

ತಿಪಟೂರು: ಸಿರಿಧಾನ್ಯ ಪಾಕ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2023, 8:22 IST
Last Updated 18 ಸೆಪ್ಟೆಂಬರ್ 2023, 8:22 IST
ತಿಪಟೂರು ತಾಲ್ಲೂಕಿನ ಪರುವಗೊಂಡನಹಳ್ಳಿಯಲ್ಲಿ ಸಿರಿಧಾನ್ಯಗಳ ಖಾದ್ಯ ಸ್ಪರ್ಧೆ ನಡೆಯಿತು
ತಿಪಟೂರು ತಾಲ್ಲೂಕಿನ ಪರುವಗೊಂಡನಹಳ್ಳಿಯಲ್ಲಿ ಸಿರಿಧಾನ್ಯಗಳ ಖಾದ್ಯ ಸ್ಪರ್ಧೆ ನಡೆಯಿತು    

ತಿಪಟೂರು: ತಾಲ್ಲೂಕಿನ ಪರುವಗೊಂಡನಹಳ್ಳಿಯಲ್ಲಿ ಕೃಷಿ ವಿಶ್ವವಿದ್ಯಾಲಯ, ಐಸಿಎಆರ್‌ ಕೃಷಿ ವಿಜ್ಞಾನ ಕೇಂದ್ರದಿಂದ ಸಿರಿಧಾನ್ಯ ಪಾಕ ಸ್ಪರ್ಧೆ- ಆಹಾರ ಮೇಳ ಈಚೆಗೆ ನಡೆಯಿತು.

ತುಮಕೂರಿನ ಉಪ ಕೃಷಿ ನಿರ್ದೇಶಕರ ಅಶೋಕ್ ಮಾತನಾಡಿ, ಜನರ ಜೀವನಶೈಲಿ ಬದಲಾಗುತ್ತಿದ್ದಂತೆ ಸಾಂಪ್ರದಾಯಿಕ ಹಾಗೂ ಆರೋಗ್ಯಕರ ಅಡುಗೆ ಮರೆತೇ ಹೋಗಿವೆ. ಸಿರಿಧಾನ್ಯಗಳು ಪೌಷ್ಟಿಕತೆಗೆ ಹೆಸರುವಾಸಿ. ಹೆಚ್ಚಿನ ಪ್ರಮಾಣದ ಪ್ರೋಟಿನ್, ನಾರಿನಾಂಶವಿರುತ್ತದೆ ಎನ್ನುವುದರ ಜೊತೆಗೆ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ಕಡೆಗೆ ಗಮನಹರಿಸಬೇಕು ಎಂದು ತಿಳಿಸಿದರು.

ಕೇಂದ್ರದ ಮುಖ್ಯಸ್ಥ ಡಾ.ವಿ.ಗೋವಿಂದ ಗೌಡ ಮಾತನಾಡಿ, ಸಿರಿಧಾನ್ಯ ಬೆಳೆಯಲು ಫಲವತ್ತಾದ ಭೂಮಿಯೇ ಬೇಕೆಂದಿಲ್ಲ. ವಿಶಿಷ್ಟ ಗುಣಗಳಿರುವ ಸಿರಿಧಾನ್ಯಗಳನ್ನು ಕಡಿಮೆ ಮಳೆಯಾಶ್ರಿತ ಪ್ರದೇಶದಲ್ಲಿಯೂ ಬೆಳೆಯಬಹುದು. ಮೌಲ್ಯವರ್ಧಿತ ಉತ್ಪನ್ನ ತಯಾರಿಸಿ ಮಾರುಕಟ್ಟೆ ಮಾಡುವುದರಿಂದ ಹೆಚ್ಚು ಆದಾಯ ಪಡೆಯಬಹುದು ಎಂದರು.

ADVERTISEMENT

ಕಾರ್ಯಕ್ರಮದಲ್ಲಿ 35ಕ್ಕೂ ಹೆಚ್ಚು ಮಹಿಳೆಯರು ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯ ಪ್ರದರ್ಶಿದರು. ಅತ್ಯುತ್ತಮ ಸಿರಿಧಾನ್ಯ ಖಾದ್ಯವನ್ನು ತಯಾರಿಸಿದ ಐದು ಮಹಿಳೆಯರಿಗೆ ಪ್ರಶಸ್ತಿ ನೀಡಲಾಯಿತು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ನಿತ್ಯಶ್ರೀ ಕೆ., ಡಾ. ಕೀರ್ತಿಶಂಕರ್ ಕೆ., ಕೃಷಿ ಇಲಾಕೆಯ ಎಡಿಎ ಚನ್ನಕೇಶವಮೂರ್ತಿ, ತಿಪಟೂರು ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ಧರಾಮೇಶ್ವರ, ಎಆರ್‌ಎಸ್‌ನ ಕ್ಷೇತ್ರ ಅಧೀಕ್ಷಕ ಡಾ.ಯೋಗೀಶ್, ಸಾರ್ಥವಳ್ಳಿ ಗ್ರಾ.ಪಂ.ಉಪಾಧ್ಯಕ್ಷೆ ಭವ್ಯ, ತಡಸೂರಿನ ಪ್ರಗತಿಪರ ರೈತ ಯೋಗಾನಂದ ಮೂರ್ತಿ, ಪಿಡಿಒ ಅಡವೀಶ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.