ADVERTISEMENT

ತುಮಕೂರು: ಮಹಿಳೆಗೆ ₹9 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 18:23 IST
Last Updated 10 ಜುಲೈ 2025, 18:23 IST
<div class="paragraphs"><p>ಸೈಬರ್‌ ಕ್ರೈಂ</p></div>

ಸೈಬರ್‌ ಕ್ರೈಂ

   

ತುಮಕೂರು: ವರ್ಕ್‌ ಫ್ರಮ್‌ ಹೋಮ್‌ ಆಮಿಷಕ್ಕೆ ಒಳಗಾಗಿ ತಾಲ್ಲೂಕಿನ ಕನ್ನೇನಹಳ್ಳಿ ಗ್ರಾಮದ ಸುಷ್ಮಾವೇಣಿ ₹9 ಲಕ್ಷ ಕಳೆದುಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ ಬಳಸುವಾಗ ‘ಮೀಶೊ ಆನ್‌ಲೈನ್‌ ವರ್ಕ್‌ ಫ್ರಮ್‌ ಹೋಮ್‌’ ಜಾಹೀರಾತು ಕ್ಲಿಕ್‌ ಮಾಡಿದ್ದಾರೆ. ನಂತರ ವಾಟ್ಸ್‌ ಆ್ಯಪ್‌ ಮೂಲಕ ಮೆಸೇಜ್‌ ಮಾಡಿದ ಆರೋಪಿಗಳು ಮೀಶೊ ಕಂಪನಿಯ ಮ್ಯಾನೇಜರ್‌ ಎಂದು ಪರಿಚಯಿಸಿಕೊಂಡಿದ್ದಾರೆ. ನಂತರ ‘ಸೀನಿಯರ್‌ ಟಾಸ್ಕ್‌ ಗ್ರೂಪ್‌’ ಎಂಬ ಟೆಲಿಗ್ರಾಮ್‌ ಗ್ರೂಪ್‌ಗೆ ಸೇರಿಸಿದ್ದಾರೆ. ಸದರಿ ಗ್ರೂಪ್‌ನಲ್ಲಿ ವೆಬ್‌ಸೈಟ್‌ ಲಿಂಕ್‌ ಕಳುಹಿಸಿ ಆಭರಣಗಳಿಗೆ ಲೈಕ್‌ ಮತ್ತು ರಿವ್ಯೂ ನೀಡಿದರೆ ಹಣ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ. ಹೀಗೆ ಮಾಡಿದ ನಂತರ ಅವರ ಖಾತೆಗೆ ₹237 ಜಮಾ ಮಾಡಲಾಗಿದೆ.

ADVERTISEMENT

ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಹೇಳಿ ನಂಬಿಸಿದ್ದಾರೆ. ಅದನ್ನು ನಂಬಿ ಹಂತ ಹಂತವಾಗಿ ₹9,06,860 ಹಣವನ್ನು ಸೈಬರ್‌ ವಂಚಕರು ಹೇಳಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ವಂಚನೆಯ ವಿಷಯ ಅರಿವಿಗೆ ಬಂದ ನಂತರ ಸೈಬರ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.