ADVERTISEMENT

ಸ್ವಚ್ಛಗೊಂಡ ವೆಂಕಣ್ಣನ ಕಟ್ಟೆ ಪಾರ್ಕ್

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 4:59 IST
Last Updated 29 ಅಕ್ಟೋಬರ್ 2025, 4:59 IST
ಚಿಕ್ಕನಾಯಕನಹಳ್ಳಿಯ ವೆಂಕಣ್ಣನ ಕಟ್ಟೆ ಪಾರ್ಕ್ ಸ್ವಚ್ಛಗೊಂಡಿದೆ
ಚಿಕ್ಕನಾಯಕನಹಳ್ಳಿಯ ವೆಂಕಣ್ಣನ ಕಟ್ಟೆ ಪಾರ್ಕ್ ಸ್ವಚ್ಛಗೊಂಡಿದೆ   

ಚಿಕ್ಕನಾಯಕನಹಳ್ಳಿ: ಪಟ್ಟಣದ ವೆಂಕಣ್ಣನ ಕಟ್ಟೆ ಪಾರ್ಕ್ ಕೊನೆಗೂ ಸ್ವಚ್ಛತೆ ಕಂಡಿದ್ದು, ದೀರ್ಘಕಾಲದ ನಿರ್ಲಕ್ಷ್ಯದಿಂದ ಮುಕ್ತಿ ಪಡೆದಿದೆ.

ಕಳೆದ ಕೆಲವು ದಿನಗಳ ಹಿಂದೆ ವೆಂಕಣ್ಣನ ಕಟ್ಟೆ ಪಾರ್ಕ್ ಮೂಲ ಸೌಲಭ್ಯಗಳ ಕೊರತೆ, ಪಾರ್ಕ್‌ನ ದುಃಸ್ಥಿತಿಯ ಬಗ್ಗೆ ‘ಪ್ರಜಾವಾಣಿ’ಯಲ್ಲಿ ‘ಪಾಳು ಬಿದ್ದ ವೆಂಕಣ್ಣನ ಕಟ್ಟೆ ಪಾರ್ಕ್’ ಶೀರ್ಷಿಕೆಯಡಿ ಸುದ್ದಿ ಪ್ರಕಟಗೊಂಡಿತ್ತು. ಎಚ್ಚೆತ್ತ ಪುರಸಭೆ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡು ಪಾರ್ಕ್ ಸುಸ್ಥಿತಿಗೆ ತಂದಿದ್ದಾರೆ.

‘ಪ್ರಜಾವಾಣಿ’ ವರದಿಯಿಂದ ಆದ ಈ ಬದಲಾವಣೆಗೆ ಸ್ಥಳೀಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಇದೇ ರೀತಿ ಪಾರ್ಕ್‌ನ ಮೂಲ ಸೌಲಭ್ಯಗಳನ್ನು ಮತ್ತು ಆಟದ ಸಾಮಗ್ರಿಗಳು ಸಹ ಸರಿಪಡಿಸಿ, ಸ್ವಚ್ಛತೆಯನ್ನು ನಿರಂತರವಾಗಿ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

‘ಗಿಡ ಗಂಟಿಗಳಿಂದ ಆವೃತ್ತವಾಗಿದ್ದ ಪಾರ್ಕ್ ಸ್ವಚ್ಛವಾಗಿದೆ. ಸುತ್ತಲಿನ ತಂತಿಬೇಲಿ ಬೀಳುವ ಹಂತದಲ್ಲಿದೆ. ಶೋ ಗಿಡಗಳನ್ನು ಹಾಕಿ ನಿರ್ವಹಣೆಗೆ ಯಾರನ್ನಾದರೂ ನೇಮಿಸಿದರೆ ಸೂಕ್ತ’ ಎಂದು ಮಾತಾ ಗಾರ್ಮೆಂಟ್ಸ್ ಯೋಗಿಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.