ADVERTISEMENT

ತಿಪಟೂರು: ಕೊಬ್ಬರಿ ಬೆಲೆ ನೀತಿ ರೂಪಿಸಿಲು ಕ್ರಮ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 2:54 IST
Last Updated 29 ಜುಲೈ 2025, 2:54 IST
<div class="paragraphs"><p>ಕೊಬ್ಬರಿ ಬೆಲೆ ನೀತಿ ರೂಪಿಸುವ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯ ದೆಹಲಿ ಅಧಿಕಾರಿಗಳ ತಂಡ ತಿಪಟೂರಿಗೆ ಭೇಟಿ ನೀಡಿದರು</p></div>

ಕೊಬ್ಬರಿ ಬೆಲೆ ನೀತಿ ರೂಪಿಸುವ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯ ದೆಹಲಿ ಅಧಿಕಾರಿಗಳ ತಂಡ ತಿಪಟೂರಿಗೆ ಭೇಟಿ ನೀಡಿದರು

   

ತಿಪಟೂರು: ಕೊಬ್ಬರಿ ಸಂಸ್ಕರಣೆಗೆ ತಗುಲುವ ವಿವಿಧ ಹಂತದ ವೆಚ್ಚದ ಅಂಶವನ್ನು ಪರಿಗಣಿಸಿ ಕೊಬ್ಬರಿ ಬೆಲೆ ನೀತಿ ರೂಪಿಸುವ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯ ದೆಹಲಿ ಅಧಿಕಾರಿಗಳ ತಂಡ ತಿಪಟೂರಿಗೆ ಸೋಮವಾರ ಭೇಟಿ ನೀಡಿತು.

ತೆಂಗಿನಕಾಯಿಯಿಂದ ಕೊಬ್ಬರಿ ಆಗಿ ಸಂಸ್ಕರಿಸಲು ಅಗತ್ಯವಿರುವ ವಿವಿಧ ಹಂತ, ಅದಕ್ಕೆ ತಗುಲುವ ವೆಚ್ಚ ಸೇರಿದಂತೆ ತೆಂಗಿನ ಉಪ ವಸ್ತುಗಳ ತಯಾರಿಕೆ ಬಗ್ಗೆಯೂ ಮಾಹಿತಿ ಪಡೆದುಕೊಂಡರು.

ADVERTISEMENT

ತಿಪಟೂರು ತಾಲ್ಲೂಕಿನ ಬಿಳಿಗೆರೆ ಪಾಳ್ಯ ಗ್ರಾಮಕ್ಕೆ ಭೇಟಿ ನೀಡಿ ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ತಿಪಟೂರು ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಕಬ್ಬಿಣದಿಂದ ತಯಾರಿಸಿರುವಂತ ತೆಂಗಿನಕಾಯಿ ಶೇಖರಣಾ ಘಟಕವನ್ನು ವೀಕ್ಷಿಸಿದರು. ನೆಲ ಅಟ್ಟ ಹಾಗೂ ಆಧುನಿಕ ಶೇಖರಣಾ ಘಟಕದಲ್ಲಿ ತೆಂಗಿನಕಾಯಿಯಿಂದ ಕೊಬ್ಬರಿ ತಯಾರಾಗುವವರೆಗೂ ತಗಲುವ ವೆಚ್ಚ ಮತ್ತು ವಿವಿಧ ಹಂತಗಳ ಮಾಹಿತಿಯನ್ನು ರೈತರಿಂದ ಪಡೆದರು. ತೆಂಗಿನ ತೋಟಗಳಿಗೆ ಭೇಟಿ ನೀಡಿ ತೆಂಗಿನ ಬೇಸಾಯ ಪದ್ಧತಿ, ತೆಂಗಿನ ಬೆಳವಣಿಗೆ ಹಂತಗಳ ಬಗ್ಗೆ ರೈತರಿಂದ ಮಾಹಿತಿ ಕಲೆ ಹಾಕಿದರು.

ತೆಂಗಿನ ಎಣ್ಣೆ ತಯಾರಿಕೆಯ ಎಣ್ಣೆಗಾಣಕ್ಕೆ ತೆರಳಿ ವಿವಿಧ ಹಂತಗಳನ್ನು ಪರಿಶೀಲಿಸಿದರು. ಜಕ್ಕನಹಳ್ಳಿ ಗೇಟ್‌ನಲ್ಲಿರುವ ನಾರು ಮತ್ತು ಕೊಕೊಪೀಟ್ ಕಂಪನಿಗೆ ಭೇಟಿ ನೀಡಿ ನಾರನ್ನು ತಯಾರಿಸುವ ವಿಧಾನ, ತಗಲುವ ವೆಚ್ಚ, ರೈತರಿಂದ ಖರೀದಿಸುವ ವೆಚ್ಚದ ಮಾಹಿತಿ
ಸಂಗ್ರಹಿಸಿದರು.

ತಿಪಟೂರಿನ ತಾಲ್ಲೂಕು ಕಚೇರಿಯಲ್ಲಿ ಶಾಸಕ ಕೆ.ಷಡಕ್ಷರಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳನ್ನು ಒಳಗೊಂಡಂತೆ ತೆಂಗು ಬೆಳೆಗಾರರು, ರೈತರು, ರೈತ ಸಂಘದ ಮುಖಂಡರೊಂದಿಗೆ ಸಭೆಯನ್ನು ನಡೆಸಿದರು. ಸಭೆಯಲ್ಲಿ ತೆಂಗಿನಕಾಯಿ ಕಟಾವು ಮಾಡಿದ ನಂತರದಿಂದ ಮಾರಾಟ ಮಾಡುವವರೆಗೆ ರೈತರಿಂದ ತಗಲುವ ಒಟ್ಟು ವೆಚ್ಚದ ಮಾಹಿತಿ ದಾಖಲಿಸಿದರು.

ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯದ ಅಧಿಕಾರಿ ಪ್ರೇಮ್ ಚಂದ್, ಸಹ ನಿರ್ದೇಶಕ ವಿಪಿನ್ ಸಿಂಘ್, ತೆಂಗು ಅಭಿವೃದ್ಧಿ ಮಂಡಳಿ ಉಪನಿರ್ದೇಶಕ ಗುರುರಾಜ್, ಬೆಂಗಳೂರು ವಿಭಾಗ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ವಿಶ್ವನಾಥ್, ತುಮಕೂರು ಉಪನಿರ್ದೇಶಕಿ ಶಾರದಮ್ಮ ಬಿ.ಸಿ., ಉಪವಿಭಾಗಾಧಿಕಾರಿ ಸಪ್ತಶ್ರೀ ಬಿ.ಕೆ., ತಹಶೀಲ್ದಾರ್ ಮೋಹನ್ ಕುಮಾರ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಚಂದ್ರಶೇಖರ್ ಎಚ್.ಆರ್ ಇದ್ದರು.

ಸೂಕ್ತ ಬೆಲೆ ಕೊಡಿಸುವ ಪ್ರಯತ್ನ

ಶಾಸಕ ಕೆ.ಷಡಕ್ಷರಿ ಮಾತನಾಡಿ, ಏರಿಕೆಯಲ್ಲಿರುವ ಕೊಬ್ಬರಿ ಉತ್ಪಾದನಾ ವೆಚ್ಚ ಹಾಗೂ ಸಂಸ್ಕರಣಾ ವೆಚ್ಚಗಳನ್ನು ತಂಡದ ತಜ್ಞರಿಗೆ ಮನವರಿಕೆ ಮಾಡಲಾಗಿದೆ. ಸೂಕ್ತ ಬೆಲೆ ಕೊಡಿಸುವಲ್ಲಿ ಪ್ರಯತ್ನ ಮಾಡಲಾಗುವುದೆಂದು ತಿಳಿಸಿದರು. ತೋಟಗಾರಿಕೆ ಇಲಾಖೆಯಿಂದ ಈಗಾಗಲೇ ಸಲ್ಲಿಸಿರುವ ಒಟ್ಟು ಉತ್ಪಾದನಾ ವೆಚ್ಚವನ್ನು ಪರಿಗಣಿಸುವಂತೆ ರೈತರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.