
ಮಧುಗಿರಿ: ಮಡಿವಾಳ ಮಾಚಿದೇವರು ಬಂಡಾಯ ವ್ಯಕ್ತಿತ್ವದ ದನಿಯಾಗಿದ್ದರು ಎಂದು ಸರ್ವಜ್ಞ ವೇದಿಕೆಯ ಅಧ್ಯಕ್ಷ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕ ವೆಂಕಟರಮಣಪ್ಪ ಹೇಳಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಮಡಿವಾಳ ಸಂಘ ಹಾಗೂ ತಾಲ್ಲೂಕು ಆಡಳಿತದಿಂದ ನಡೆದ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಮಾತನಾಡಿದರು.
12ನೇ ಶತಮಾನದಲ್ಲಿ ತಮ್ಮ ದಿಟ್ಟ ನಡತೆ, ಕಂದಾಚಾರ, ಜಾತೀಯತೆ, ಆಷಾಢಭೂತಿತನದ ವಿರುದ್ಧ ಮಾಚಿದೇವರು ಸಿಡಿದೆದ್ದಿದ್ದರು. ಇಂದು ಸರ್ಕಾರದಿಂದ 33 ದಾರ್ಶನಿಕರ ಜಯಂತಿ ಆಚರಿಸಲಾಗುತ್ತಿದೆ. ಇದರಿಂದ ತಳ ಸಮುದಾಯ ಸಂಘಟಿತರಾಗಲು ಸಹಾಯವಾಗಿವೆ. ಎಲ್ಲ ದಾರ್ಶನಿಕರ ಹೆಸರಿನಲ್ಲಿ ಜಿಲ್ಲೆಗೊಂದು ಸಮುದಾಯ ಭವನ ನಿರ್ಮಿಸಬೇಕೆಂದು ಮತ್ತು ಹಿಂದುಳಿದ ಜಾತಿಯ ಮಹಿಳೆಯರ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮ ರೂಪಿಸಬೇಕು. ಅನ್ನಪೂರ್ಣಮ್ಮ ವರದಿ ಪ್ರಕಾರ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದರು.
ಶಿರಸ್ತೆದಾರ್ ನಾಗಮಣಿ, ಮಡಿವಾಳ ಸಂಘದ ಅಧ್ಯಕ್ಷ ಈಶ್ವರಪ್ಪ, ಲಕ್ಷ್ಮಿಕಾಂತಯ್ಯ, ವೆಂಕಟಾಚಲಪತಿ, ಪ್ರಕಾಶ್, ರಂಗನಾಥ್, ನಾಗರಾಜು, ಮಂಜುನಾಥ್, ಹರೀಶ್, ನರಸಪ್ಪ, ರಜಾಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.