ತುಮಕೂರು: ಸತತ ಎರಡನೇ ವಾರವೂ ಕೊಬ್ಬರಿ ಬೆಲೆ ಏರಿಕೆಯಾಗಿದೆ. ಕ್ವಿಂಟಲ್ ದರವು ₹21ಸಾವಿರದ ಗಡಿ ದಾಟಿದ್ದು, ₹22 ಸಾವಿರದ ಸಮೀಪದಲ್ಲಿದೆ.
ಮೇ 26ರಂದು ₹20,900ಕ್ಕೆ ಮಾರಾಟವಾಗಿದ್ದ ಕೊಬ್ಬರಿ ಸಾರ್ವಕಾಲಿಕ ದಾಖಲೆ ಬರೆದಿತ್ತು. ಎರಡು ದಿನಗಳ ಅಂತರದಲ್ಲಿ ಕ್ವಿಂಟಲ್‌ಗೆ ₹900 ಹೆಚ್ಚಳವಾಗಿದೆ.
ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಗುರುವಾರ ಕ್ವಿಂಟಲ್‌ಗೆ ಗರಿಷ್ಠ ₹21,809, ಕನಿಷ್ಠ ₹20 ಸಾವಿರ, ಮಾದರಿ ದರ ₹20,500 ಇತ್ತು. 2,613 ಕ್ವಿಂಟಲ್ (6,078 ಚೀಲ) ಆವಕವಾಗಿತ್ತು.
ಮಾರುಕಟ್ಟೆಯಲ್ಲಿ ಕೊಬ್ಬರಿ ಆವಕ ಕಡಿಮೆಯಾಗಿದ್ದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. 26ರಂದು 3,056 ಕ್ವಿಂಟಲ್ ಕೊಬ್ಬರಿ ಮಾರುಕಟ್ಟೆಗೆ ಬಂದಿತ್ತು, ಗುರುವಾರ 2,613 ಕ್ವಿಂಟಲ್ ಆವಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.