ADVERTISEMENT

ಶಿರಾದ ಬೇಗಂ ಮೊಹಲ್ಲಾ ಸೀಲ್‌ಡೌನ್

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 12:44 IST
Last Updated 19 ಏಪ್ರಿಲ್ 2020, 12:44 IST
ಶಿರಾದ ಬೇಗಂ ಮೊಹಲ್ಲಾದಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿ ವಾಸವಾಗಿದ್ದ ಮನೆಯ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಮಾಡಿದ ಹಿನ್ನೆಲೆಯಲ್ಲಿ ರಸ್ತೆಗಳಿಗೆ ತಗಡಿನ ಸೀಟುಗಳನ್ನು ಕಟ್ಟಲಾಯಿತು
ಶಿರಾದ ಬೇಗಂ ಮೊಹಲ್ಲಾದಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿ ವಾಸವಾಗಿದ್ದ ಮನೆಯ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಮಾಡಿದ ಹಿನ್ನೆಲೆಯಲ್ಲಿ ರಸ್ತೆಗಳಿಗೆ ತಗಡಿನ ಸೀಟುಗಳನ್ನು ಕಟ್ಟಲಾಯಿತು   

ಶಿರಾ: ನಗರದ ಬೇಗಂ ಮೊಹಲ್ಲಾದಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿ ವಾಸವಾಗಿದ್ದ ಮನೆಯ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿಯಿಂದ ಸೀಲ್‌ಡೌನ್ ಮಾಡಲಾಗಿದೆ.

ಕೊರೊನಾದಿಂದ ಮಾರ್ಚ್‌ 27 ರಂದು ವ್ಯಕ್ತಿ ಮೃತ ಪಟ್ಟ ಹಿನ್ನೆಲೆಯಲ್ಲಿ ಅವರು ವಾಸವಾಗಿದ್ದ ಮನೆಯ ಸುತ್ತಮುತ್ತಲಿನ 3 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ರೆಡ್ ಜೋನ್ ಎಂದು ಹಾಗೂ 7 ಕಿ.ಮೀ ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಘೋಷಿಸಲಾಗಿತ್ತು. ರೆಡ್ ಜೋನ್ ಪ್ರದೇಶದಿಂದ ಯಾರೂ ಹೊರಗೆ ಹೋಗದಂತೆ ಮತ್ತು ಬೇರೆಯವರು ಒಳಗೆ ಬರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು.

ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಮಗನಿಗೂ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗಿತ್ತು. ನಂತರ ಬಾಲಕನಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಕೊರೊನಾ ಸೋಂಕಿನಿಂದ ಗುಣಮುಖನಾಗಿದ್ದಾನೆ. ಆತನ ಸಂಪರ್ಕದಲ್ಲಿದ್ದವರ ಫಲಿತಾಂಶ ಸಹ ನೆಗಟೀವ್ ಬಂದಿದ್ದು ಬಾಲಕನ ಜೊತೆಗೆ ಅವರನ್ನು ಸಹ ಮನೆಗಳಿಗೆ ಕಳುಹಿಸಲಾಗಿದೆ.

ADVERTISEMENT

ಶಿರಾದಲ್ಲಿ ಎಲ್ಲ ಪ್ರಕರಣಗಳ ಫಲಿತಾಂಶ ನೆಗಟಿವ್ ಬಂದ ಕಾರಣ ಕೊರೊನಾದಿಂದ ಮೃತಪಟ್ಟ ವ್ಯಕ್ತಿ ವಾಸವಾಗಿದ್ದ ಮನೆಯ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಮಾತ್ರ ಸರ್ಕಾರದ ಆದೇಶದಂತೆ ಸೀಲ್‌ಡೌನ್ ಮಾಡಲಾಗಿದೆ.

ಸ್ವಪ್ರೇರಣೆಯಿಂದ ಸೀಲ್‌ಡೌನ್: ಪಕ್ಕದ ಆಂಧ್ರ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಲಾಕ್‌ಡೌನ್ ಇದ್ದರೂ ಕೆಲವರು ಅಕ್ರಮವಾಗಿ ಆಂಧ್ರಪ್ರದೇಶದಿಂದ ಬರುತ್ತಿರುವುದರಿಂದ ಆತಂಕಗೊಂಡಿರುವ ಬರಗೂರು ಗ್ರಾಮಸ್ಥರು ಸ್ವಪ್ರೇರಣೆಯಿಂದ ಗ್ರಾಮವನ್ನು ಸೀಲ್‌ಡೌನ್ ಮಾಡಲು ತೀರ್ಮಾನಿಸಿದ್ದಾರೆ.

ಅಗತ್ಯ ಸೇವೆಗಳಾದ ಔಷಧಿ ಅಂಗಡಿ, ಹಾಲು, ಆಸ್ಪತ್ರೆ ಹೊರತು ಪಡಿಸಿ ಉಳಿದ ಎಲ್ಲವನ್ನು ಮುಚ್ಚಿದ್ದು, ಮನೆಯಿಂದ ಯಾರು ಸಹ ಹೊರಬರದಂತೆ ಸಂಪೂರ್ಣವಾಗಿ ಸೀಲ್‌ಡೌನ್ ಮಾಡಿರುವುದು ವಿಶೇಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.