ADVERTISEMENT

ತುಮಕೂರು: ಕೋವಿಡ್‌ನಿಂದ 6 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 1:41 IST
Last Updated 7 ಜೂನ್ 2021, 1:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತುಮಕೂರು: ಕಳೆದ ಒಂದೆರಡು ದಿನಗಳಿಂದ ಕಡಿಮೆಯಾಗಿದ್ದ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಭಾನುವಾರ ತುಸು ಏರಿಕೆಯಾಗಿದ್ದು, 698 ಮಂದಿಗೆ ಸೋಂಕು ದೃಢಪಟ್ಟಿದೆ.

ಸಾವಿನ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು ಶನಿವಾರ 4 ಜನರು ಮೃತಪಟ್ಟಿದ್ದರೆ, ಭಾನುವಾರ 6 ಮಂದಿ ಸಾವು ಕಂಡಿದ್ದಾರೆ. ತುಮಕೂರು ನಗರಹಾಗೂ ತಾಲ್ಲೂಕಿನಲ್ಲಿ 2, ತುರುವೇಕೆರೆ, ತಿಪಟೂರು, ಶಿರಾ, ಪಾವಗಡ ತಾಲ್ಲೂಕಿನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ತುಮಕೂರು 104, ಚಿಕ್ಕನಾಯಕನಹಳ್ಳಿ 66, ಗುಬ್ಬಿ 32, ಕೊರಟಗೆರೆ 41, ಕುಣಿಗಲ್ 35, ಮಧುಗಿರಿ 50 ಮಂದಿಗೆ ಸೋಂಕು ಖಚಿತಪಟ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.