ADVERTISEMENT

ಸೃಜನಶೀಲತೆ ಪ್ರದರ್ಶನದ ವೇದಿಕೆ

ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಮತ್ತು ವರಿನ್ ಅಂತರರಾಷ್ಟ್ರೀಯ ವಸತಿ ಶಾಲೆ ಸಹಯೋಗದಲ್ಲಿ 18ರಂದು ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 11:27 IST
Last Updated 9 ಜನವರಿ 2020, 11:27 IST
ಚಿತ್ರಕಲಾ ಸ್ಪರ್ಧೆಯ ಭಿತ್ತಿಪತ್ರಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.
ಚಿತ್ರಕಲಾ ಸ್ಪರ್ಧೆಯ ಭಿತ್ತಿಪತ್ರಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.   

ತುಮಕೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳು ವರಿನ್ ಅಂತರರಾಷ್ಟ್ರೀಯ ವಸತಿ ಶಾಲೆ ಸಹಯೋಗದಲ್ಲಿ ಜ.18ರಂದು ಹಮ್ಮಿಕೊಂಡಿರುವ ಚಿತ್ರಕಲಾ ಸ್ಪರ್ಧೆಯ ಭಿತ್ತಿಪತ್ರಗಳನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ತುಮಕೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ಹಾಗೂ ವರಿನ್ ಅಂತರರಾಷ್ಟ್ರೀಯ ಶಾಲೆ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಮತಾ ಗುರುವಾರ ಬಿಡುಗಡೆ ಮಾಡಿದರು.

ಕಾರ್ಯಕ್ರಮಕ್ಕೆ ಶುಭಕೋರಿದ ಕೆ.ಚನ್ನಬಸಪ್ಪ ಅವರು, ‘ಚಿತ್ರಕಲೆ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುತ್ತದೆ. ಈ ಸ್ಪರ್ಧೆಯು ಮಕ್ಕಳಲ್ಲಿನ ಪ್ರತಿಭೆ ಪ್ರದರ್ಶನ ಮತ್ತು ಸೃಜನಶೀಲ ಆಸಕ್ತಿಯನ್ನು ತೋರಗೊಡಲು ನೆರವಾಗುತ್ತದೆ’ ಎಂದರು.

‘ಚಿತ್ರ ಕಲೆ ಮನಸ್ಸುಗಳನ್ನು ಅರಳಿಸುತ್ತದೆ. ಸಮಾಜದ ನಾನಾ ಬಗೆಯ ವೈವಿಧ್ಯಗಳನ್ನು, ಸಮಸ್ಯೆಗಳನ್ನು ಈ ಕಲೆಯ ಮೂಲಕ ಅಭಿವ್ಯಕ್ತಿಸಬಹುದು. ಪತ್ರಿಕೆ ಮತ್ತು ಶಾಲೆ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿರುವುದು ಉತ್ತಮ ಬೆಳವಣಿಗೆ’ ಎಂದು ಹೇಳಿದರು.

ADVERTISEMENT

ಸ್ಪರ್ಧೆಯಲ್ಲಿನ ಆಯ್ದ ಚಿತ್ರಗಳು ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಳ್ಳಲಿವೆ. 5ರಿಂದ 7ನೇ ತರಗತಿ ಮಕ್ಕಳು: ‘ರಾಷ್ಟ್ರೀಯ ಹಬ್ಬ’ ಮತ್ತು 8ರಿಂದ 10ನೇ ತರಗತಿ ಮಕ್ಕಳು ‘ಸ್ಮಾರ್ಟ್‌ಸಿಟಿ’ ಎಂಬ ವಿಷಯದ ಕುರಿತು ತಮ್ಮ ಕಲ್ಪನೆಯಲ್ಲಿ ಚಿತ್ರಗಳನ್ನು ಬರೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.