ADVERTISEMENT

ಅಂಗವಿಕಲ ಮಕ್ಕಳ ಪ್ರತಿಭೆ ಅನಾವರಣ

ಜಿಲ್ಲಾ ಮಟ್ಟದ ಅಂಗವಿಕಲರ ಕ್ರೀಡಾಕೂಟ; ನೂರಾರು ಮಕ್ಕಳು ಭಾಗಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:09 IST
Last Updated 27 ನವೆಂಬರ್ 2025, 5:09 IST
ತುಮಕೂರಿನಲ್ಲಿ ಬುಧವಾರ ನಡೆದ ಅಂಗವಿಕಲರ ಕ್ರೀಡಾಕೂಟದಲ್ಲಿ ಜಾವೆಲಿನ್‌ ಎಸೆದ ಮಹಿಳೆ
ತುಮಕೂರಿನಲ್ಲಿ ಬುಧವಾರ ನಡೆದ ಅಂಗವಿಕಲರ ಕ್ರೀಡಾಕೂಟದಲ್ಲಿ ಜಾವೆಲಿನ್‌ ಎಸೆದ ಮಹಿಳೆ   

ತುಮಕೂರು: ಅಂಗವೈಕಲ್ಯ ಸಾಧನೆಗೆ ಅಡ್ಡಿಯಲ್ಲ ಎಂಬುವುದನ್ನು ಅಂಗವಿಕಲರು ಮತ್ತೊಮ್ಮೆ ಸಾಬೀತು ಪಡಿಸಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕ್ರೀಡಾ ಸ್ಫೂರ್ತಿ ಮೆರೆದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧ ಶಾಲೆಗಳ ಅಂಗವಿಕಲ ಮಕ್ಕಳು ತಮ್ಮ ಸಾಮರ್ಥ್ಯ ಪರೀಕ್ಷೆಗೆ ಒಡ್ಡಿದರು. ಓಟ, ಗುಂಡು ಎಸೆತ, ಚೆಂಡು ಎಸೆತ, ಗಾಯನ ಸೇರಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಮಕ್ಕಳ ವಿಶೇಷ ಪ್ರತಿಭೆ ಅನಾವರಣಕ್ಕೆ ಕ್ರೀಡಾಕೂಟ ವೇದಿಕೆ ಕಲ್ಪಿಸಿತು.

ಫಲಿತಾಂಶ: ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರು.

ADVERTISEMENT

ಬಾಲಕರ ವಿಭಾಗ: ಚೆಂಡು ಎಸೆತ (6ರಿಂದ 10 ವರ್ಷ)– ಎಸ್‌.ನಿತಿನ್‌, ಪ್ರಜ್ವಲ್‌, ಸಂದೀಪ್‌. (10ರಿಂದ 14)– ದೀಕ್ಷಿತ್‌, ದಿನೇಶ್‌, ಸುಮಂತ್‌. (14ರಿಂದ 18)– ಅಜರ್‌ ಅಲಿ, ಮಹ್ಮದ್‌ ಷರೀಫ್‌, ಅಭಿಷೇಕ್‌. 18 ವರ್ಷ ಮೇಲ್ಪಟ್ಟವರು– ಹೇಮಂತ್‌, ನಂದನ್‌, ಗಣೇಶ್‌. ಮ್ಯೂಸಿಕಲ್‌ ಚೇರ್‌– (6ರಿಂದ 10 ವರ್ಷ)– ಎಚ್‌.ಜಿ.ಮೋಹಿತ್‌, ಪೂರ್ವಿಕ್‌, ಸಿದ್ದಿಕ್‌. (10ರಿಂದ 14)– ಜಿ.ಸುಮಂತ್‌, ಚಿರಂತ್‌, ವೋನಾಲಿಕ. (14ರಿಂದ 18)– ಸುಶಾಂತ್‌ ಗಣಪತಿ, ಧನ್ಯತ್‌, ಜುನೇದ್‌. 18 ವರ್ಷ ಮೇಲ್ಪಟ್ಟವರು– ರಕ್ಷಿತ್‌, ಹರ್ಷಿತ್‌.

100 ಮೀಟರ್‌ ಓಟ– (6ರಿಂದ 10 ವರ್ಷ)– ಯತೀಶ್‌, ಸೈಯದ್‌ ಸುಮಮ್‌, ಪ್ರಜ್ವಲ್‌. (10ರಿಂದ 14 ವರ್ಷ)– ಮೋಹನ್‌ ಕುಮಾರ್‌, ಕಾರ್ತಿಕ್‌, ನೂತನ್‌. (15ರಿಂದ 18)– ಮಾದೇಶ್‌, ಟಿ.ಎಚ್‌.ಮೋಹನ್‌, ಚಿದಾನಂದ ಶಿವಾನಂದ ಹಿರೇಮಠ. 18 ವರ್ಷ ಮೇಲ್ಪಟ್ಟವರು– ಪ್ರೀತಂ, ತೇಜಸ್‌.

ಗುಂಡು ಎಸೆತ– (10ರಿಂದ 14 ವರ್ಷ)– ವೆಂಕಟೇಶ್‌, ಕಾರ್ತಿಕ್‌ ಗೌಡ, ಮೋಹನ್‌. (15ರಿಂದ 18 ವರ್ಷ)– ಸುಭಾಷ್ ಚಂದ್ರ ಧರಣಿ, ಮಾದೇಶ್‌, ಚಿದಾನಂದ ಶಿವಾನಂದ ಹಿರೇಮಠ. 18 ವರ್ಷ ಮೇಲ್ಪಟ್ಟವರು– ಮಂಜುನಾಥ, ಗಂಗಾಧರಯ್ಯ, ಹೇಮಂತ್‌.

ಬಾಲಕಿಯರ ವಿಭಾಗ: 100 ಮೀಟರ್‌ ಓಟ– (6 ರಿಂದ 10 ವರ್ಷ)– ಹೇಮಲತಾ, ಭವ್ಯಾಶ್ರೀ, ನೀಲಾಂಬಿಕೆ. (15ರಿಂದ 18)– ಲಕ್ಷ್ಮಿದೇವಿ, ಜಯಲಕ್ಷ್ಮಿ, ಮುಸ್ಕಾನ್‌. ಗುಂಡು ಎಸೆತ– (15ರಿಂದ 18 ವರ್ಷ)– ಲಕ್ಷ್ಮಿದೇವಿ, ಕವನ. 18 ವರ್ಷ ಮೇಲ್ಪಟ್ಟವರು– ಎಸ್‌.ಎಚ್‌.ಭಾಗ್ಯ, ಜ್ಯೋತಿ, ಪ್ರೇಮಾ. ಚೆಂಡು ಎಸೆತ (6ರಿಂದ 10 ವರ್ಷ)– ಭವ್ಯಾ, ನೀಲಾಂಬಿಕೆ, ಉಮೇರ್‌ಬಾನು.

ಭಾವಗೀತೆ: (6ರಿಂದ 10 ವರ್ಷ)– ಯತೀಶ್‌, ಜಾಹ್ನವಿ, ಅರುಣ್‌. (15ರಿಂದ 18)– ರಾಮು, ಕರಿಬಾಳಮ್ಮ. 18 ವರ್ಷ ಮೇಲ್ಪಟ್ಟವರು– ಎಸ್‌.ಎಚ್‌.ನಾಗರಾಜು, ದಿವ್ಯಾಶ್ರೀ, ಭಾಗ್ಯ.

ಕ್ರೀಡಾಕೂಟದಲ್ಲಿ ಬಾಲಕ ಚೆಂಡು ಎಸೆದ ಪರಿ
ಮ್ಯೂಸಿಕಲ್‌ ಚೇರ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳು

ಕ್ರೀಡಾಕೂಟಕ್ಕೆ ಚಾಲನೆ

ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್‌.ಸಿದ್ದರಾಮಣ್ಣ ಚಾಲನೆ ನೀಡಿದರು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಬಿ.ಎಸ್‌.ಚಿದಾನಂದಮೂರ್ತಿ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್‌.ಜಿ.ಪವಿತ್ರಾ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.