ಪ್ರಾತಿನಿಧಿಕ ಚಿತ್ರ
ತುರುವೇಕೆರೆ: ತಾಲ್ಲೂಕಿನ ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮೇನಹಳ್ಳಿ ಲಕ್ಷ್ಮಯ್ಯ (75) ಹೇಮಾವತಿ ನಾಲೆಗೆ ಬಿದ್ದಿರಬಹುದೆಂದು ಶಂಕಿಸಿ ಅವರ ಸಂಬಂಧಿಕರು ದಂಡಿನಶಿವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೊಮ್ಮೇನಹಳ್ಳಿ ಗ್ರಾಮದ ನಿವಾಸಿ ಲಕ್ಷ್ಮಯ್ಯ ಬೊಮ್ಮೇನಹಳ್ಳಿ ಸಮೀಪದ ಹೇಮಾವತಿ ನಾಲೆ ಬಳಿ ಶನಿವಾರ ಬೆಳಗ್ಗೆ ತನ್ನ ಬೈಕ್, ಚಪ್ಪಲಿ ಮತ್ತು ಮೊಬೈಲ್‌ಅನ್ನು ಅಲ್ಲಿಯೇ ಬಿಟ್ಟಿದ್ದಾರೆ. ಸಂಜೆಯಾದರೂ ಲಕ್ಷ್ಮಯ್ಯರ ಸುಳಿವು ಕಾಣದಿರುವುದನ್ನು ಕಂಡು ಗ್ರಾಮದ ದಾರಿಹೋಕರು ಸಂಬಂಧಿಕರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಲಕ್ಷ್ಮಯ್ಯರು ಹೆಂಡತಿ ಮತ್ತು ಮಕ್ಕಳನ್ನು ಕಳೆದುಕೊಂಡು ಬಹಳ ವರ್ಷಗಳೇ ಆಗಿದ್ದು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು ಎಂದು ಕುಂದೂರಿನ ನಾಗರಾಜು ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದಂಡಿನಶಿವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.