ತಿಪಟೂರು: ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಫೆಬ್ರವರಿ 9ರಂದು ಬೆಳಗ್ಗೆ 11ಕ್ಕೆ ತಿಪಟೂರು ಆಡಳಿತ ಸೌಧ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ರೈತ ಮುಖಂಡ ಜಯನಂದಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆ ಮೂಲಕ ಭೂದಾಖಲೆ ಸಮಸ್ಯೆ, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ನೀರಾವರಿ ಮತ್ತು ವಿದ್ಯುತ್ ಸಮಸ್ಯೆ, ತೆಂಗು ಬೆಳೆ ರೋಗ ನಿಯಂತ್ರಣ, ಕೊಳವೆಬಾವಿ ದರ ನಿಯಂತ್ರಣ, ಮದ್ಯಪಾನ ಮುಕ್ತ ಗ್ರಾಮಗಳ ಘೋಷಣೆ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಹಸಿರು ಸೇನೆ ಮುಖಂಡ ತೀಮ್ಲಾಪುರ ದೇವರಾಜು ಮಾತನಾಡಿ, ಬಗರ್ ಹುಕುಂ ಜಮೀನುಗಳ ಸಾಗುವಳಿದಾರರಿಗೆ ತಕ್ಷಣ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು. ಅರಣ್ಯ ಮತ್ತು ಕಂದಾಯ ಇಲಾಖೆಗಳು ಜಂಟಿ ಸರ್ವೆ ನಡೆಸಿ ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು. ತಿಪಟೂರು ತಾಲ್ಲೂಕನ್ನು ಪೋಡಿ ಮುಕ್ತ ತಾಲ್ಲೂಕನ್ನಾಗಿ ಮಾಡಬೇಕು ಎಂದರು.
ವಿದ್ಯುತ್ ಸಮಸ್ಯೆ ಬಗ್ಗೆ, ಬೆಸ್ಕಾಂ ಸರಬರಾಜು ಮಾರ್ಗ ಮೇಲ್ದರ್ಜೆಗೇರಿಸಬೇಕು. ಹೊಸ ಟ್ರಾನ್ಸ್ ಫಾರ್ಮರ್ ಅಳವಡಿಸಿ 300 ವೋಲ್ಟೇಜ್ ವಿದ್ಯುತ್ ಒದಗಿಸಬೇಕು. ಎಲ್ಲ ರೈತರಿಗೆ ಉಚಿತ ಸೌರಶಕ್ತಿ ವ್ಯವಸ್ಥೆ ಒದಗಿಸಬೇಕೆಂದು ಒತ್ತಾಯಿಸಿದರು.
ತೆಂಗು ಬೆಳೆಗೆ ಬರುವ ರೋಗ ನಿಯಂತ್ರಣಕ್ಕಾಗಿ ತಿಪಟೂರಿನಲ್ಲಿ ತೆಂಗು ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ಕೊಳವೆ ಬಾವಿ ಕೊರೆಯುವ ದರಗಳನ್ನು ನಿಯಂತ್ರಿಸಿ ಅಧಿಕೃತ ದರಪಟ್ಟಿ ಬಿಡುಗಡೆ ಮಾಡಬೇಕು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಮದ್ಯಪಾನದ ದುಷ್ಪರಿಣಾಮ ತಡೆಯಲು ಮದ್ಯಪಾನ ಮುಕ್ತ ಹಳ್ಳಿಗಳನ್ನು ಘೋಷಿಸಬೇಕು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಅಗತ್ಯವಾದ ತಂತ್ರಜ್ಞಾನ, ಯಂತ್ರೋಪಕರಣ ಮತ್ತು ಮಾರುಕಟ್ಟೆ ಸೌಲಭ್ಯ ಸಬ್ಸಿಡಿ ದರದಲ್ಲಿ ಒದಗಿಸಬೇಕೆಂದು ಬೇಡಿಕೆ ಸಲ್ಲಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ನಾಗರಾಜು ತಡಸೂರು, ಷಡಕ್ಷರಿ ಗಡಬನಹಳ್ಳಿ, ಸಿದ್ದಯ್ಯ ಬನ್ನಿಹಳ್ಳಿ, ಶಿವಶಂಕರಯ್ಯ, ತಿಮ್ಮೇಗೌಡ ಗಡಬನಹಳ್ಳಿ, ಮತ್ತಿತ್ತರು ಹಾಜರಿದ್ದರು.
ತಿಪಟೂರು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಸಾಮೂಹಿಕ ನಾಯಕತ್ವ) ವತಿಯಿಂದ ರೈತರಿಗೆ ಸಂಬAಧಿಸಿದ ಹಲವು ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಫೆಬ್ರವರಿ 09 ಸೋಮವಾರ ಬೆಳಿಗ್ಗೆ 11 ಗಂಟೆಗೆ ತಿಪಟೂರು ಆಡಳಿತ ಸೌಧದ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಜಯನಂದಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಭೂ ದಾಖಲೆ ಸಮಸ್ಯೆ, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ, ನೀರಾವರಿ ಮತ್ತು ವಿದ್ಯುತ್ ಸಮಸ್ಯೆ, ತೆಂಗು ಬೆಳೆ ರೋಗ ನಿಯಂತ್ರಣ, ಕೊಳವೆ ಬಾವಿ ದರ ನಿಯಂತ್ರಣ, ಮದ್ಯಪಾನ ಮುಕ್ತ ಗ್ರಾಮಗಳು ಹಾಗೂ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರೈತ ಸಂಘದವತಿಯಿAದ ಪ್ರತಿಭಟನೆ ನಡೆಸಲಾಗುವುದು ಎಂದರು.
ಹಸಿರು ಸೇನೆ ಸಂಘಟನೆಯ ಮುಖಂಡ ತೀಮ್ಲಾಪುರ ದೇವರಾಜು ಮಾತನಾಡಿ ಬಗರ್ ಹುಕುಂ ಸಾಗುವಳಿದಾರರಿಗೆ ತಕ್ಷಣ ಹಕ್ಕು ಪತ್ರ ವಿತರಣೆಯಾಗಬೇಕಿದ್ದು, ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ಶೀಘ್ರ ಹಕ್ಕು ಪತ್ರ ವಿತರಿಸಬೇಕು. ತಿಪಟೂರು ತಾಲ್ಲೂಕನ್ನು ಪೋಡಿ ಮುಕ್ತ ತಾಲ್ಲೂಕನ್ನಾಗಿ ಮಾಡಬೇಕಾಗಿದೆ.
ವಿದ್ಯುತ್‌ಗಾಗಿ ಬೆಸ್ಕಾಂ ಸರಬರಾಜು ಮಾರ್ಗಗಳ ಮೇಲ್ದರ್ಜೆ, ಹಾಗೂ ಹೊಸ ವಿದ್ಯುತ್ ಪರಿವರ್ತಕ ಅಳವಡಿಕೆ ಮತ್ತು 300 ವೋಲ್ಟೇಜ್ ವಿದ್ಯುತ್ ಒದಗಿಸಬೇಕು. ಎಲ್ಲಾ ರೈತರಿಗೆ ಉಚಿತ ಸೌರ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ತೆಂಗು ಬೆಳೆ ರೋಗಗಳ ನಿಯಂತ್ರಣಕ್ಕೆ ತಿಪಟೂರಿನಲ್ಲಿ ತೆಂಗು ಸಂಶೋಧನಾ ಕೇಂದ್ರ ಸ್ಥಾಪಿಸುವಂತೆ ಒತ್ತಾಯಿಸಿ, ಕೊಳವೆ ಬಾವಿ ಕೊರೆಯುವ ದರಗಳಿಗೆ ಸರ್ಕಾರ ಕಡಿವಾಣ ಹಾಕಿ ಅಧಿಕೃತ ದರಪಟ್ಟಿ ಪ್ರಕಟಿಸಬೇಕು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಮದ್ಯಪಾನದ ದುಷ್ಪರಿಣಾಮ ತಡೆಗಟ್ಟಲು ಮದ್ಯಪಾನ ಮುಕ್ತ ಹಳ್ಳಿಗಳ ಘೋಷಣೆ ಮಾಡಬೇಕಾಗಿದ್ದು, ಮೌಲ್ಯವರ್ಧನೆಗೆ ತಂತ್ರಜ್ಞಾನ, ಯಂತ್ರೋಪಕರಣ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಸಬ್ಸಿಡಿ ದರದಲ್ಲಿ ಒದಗಿಸಬೇಕು. ಸರ್ಕಾರ ಮತ್ತು ಸಂಬAಧಿಸಿದ ಇಲಾಖೆಗಳು ತಕ್ಷಣ ಸಭೆ ನಡೆಸಿ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.
ಎಲ್ಲಾ ರೈತ ಬಾಂಧವರು ಖಾತೆ ಪಹಣಿ ಮಾಡಿಸಿಕೊಳ್ಳಲು ಹಾಗೂ ಬಗರ್ ಹುಕುಂ ಹಕ್ಕು ಪತ್ರಕ್ಕೆ ಕಾಯುತ್ತಿರುವ ರೈತರು ತಮ್ಮ ಜಮೀನಿನ ದಾಖಲೆಗಳ ಜೆರಾಕ್ಸ್ ಪ್ರತಿಗಳೊಂದಿಗೆ ಪ್ರತಿಭಟನೆಯ ದಿನ ಅರ್ಜಿ ಸಲ್ಲಿಸಿ ಸ್ವೀಕೃತಿ ಪತ್ರ ಪಡೆಯಲು ಸಂಘಟನೆ ಆಯೋಜಕರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಾಗರಾಜು ತಡಸೂರು, ಷಡಕ್ಷರಿ ಗಡಬನಹಳ್ಳಿ, ಸಿದ್ದಯ್ಯ ಬನ್ನಿಹಳ್ಳಿ, ಶಿವಶಂಕರಯ್ಯ, ತಿಮ್ಮೇಗೌಡ ಗಡಬನಹಳ್ಳಿ, ಮತ್ತಿತ್ತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.