ADVERTISEMENT

ತುಮಕೂರು: ಕಾರಿಗೆ ಬಸ್ ಡಿಕ್ಕಿ, ಬೆಂಗಳೂರಿನ ವಿಜಯನಗರದ ಐವರು ಸ್ಥಳದಲ್ಲೇ ಸಾವು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2023, 15:20 IST
Last Updated 14 ಏಪ್ರಿಲ್ 2023, 15:20 IST
ಅಪಘಾತದಲ್ಲಿ ನುಜ್ಜುಗುಜ್ಜಾಗಿರುವ ವಾಹನಗಳು
ಅಪಘಾತದಲ್ಲಿ ನುಜ್ಜುಗುಜ್ಜಾಗಿರುವ ವಾಹನಗಳು   

ತುಮಕೂರು: ರಾಷ್ಟ್ರೀಯ ಹೆದ್ದಾರಿ 48ರ ನಂದಿಹಳ್ಳಿ ಸಮೀಪ ಶುಕ್ರವಾರ ಇನ್ನೊವಾ ಕಾರಿಗೆ ಖಾಸಗಿ ಬಸ್‌ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಂಗಳೂರಿನ ವಿಜಯನಗರ ನಿವಾಸಿ ಕೆಎಸ್‌ಸಿಸಿಎಫ್ ಸಂಸ್ಥೆ ವ್ಯವಸ್ಥಾಪಕ ಗೋವಿಂದ ನಾಯಕ್ (58), ಪತ್ನಿ ತಿಪ್ಪಮ್ಮ (52), ಅವರ ಸಂಬಂಧಿಕರ ಮಕ್ಕಳಾದ ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು ಜಾಜೂರು ಗ್ರಾಮದ ದಿನೇಶ್ (12), ಪಿಂಕಿ (15) ಹಾಗೂ ಕಾರು ಚಾಲಕ ಕುಣಿಗಲ್‌ನ ರಾಜೇಶ್ (40) ಮೃತಪಟ್ಟವರು.

ಬೆಂಗಳೂರಿನಿಂದ ಜಾಜೂರು ಗ್ರಾಮಕ್ಕೆ ಸಂಬಂಧಿಕರ ಮಕ್ಕಳನ್ನು ಕರೆದುಕೊಂಡು ಗೋವಿಂದ ನಾಯಕ್‌ ತೆರಳುತ್ತಿದ್ದರು. ತುಮಕೂರು ಕಡೆಯಿಂದ ಬಂದ ಖಾಸಗಿ ಬಸ್ ರಸ್ತೆ ಡಿವೈಡರ್‌ಗೆ ಗುದ್ದಿ, ಪಕ್ಕದ ರಸ್ತೆಗೆ ಬಂದು ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.