ADVERTISEMENT

ಸಿದ್ಧರಾಮಯ್ಯರೊಂದಿಗೆ ಭಿನ್ನಾಭಿಪ್ರಾಯವಿಲ್ಲ: ಶಾಸಕ ಡಾ.ಜಿ.ಪರಮೇಶ್ವರ್

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 10:25 IST
Last Updated 27 ಸೆಪ್ಟೆಂಬರ್ 2019, 10:25 IST
   

ತುಮಕೂರು: ಸಿದ್ಧರಾಮಯ್ಯ ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ' ಗುರುವಾರ ಕೆಪಿಸಿಸಿ ಸಭೆಗೆ ಗೈರಾಗಿದ್ದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಸಭೆ 11.30ಕ್ಕೆ ನಿಗದಿಯಾಗಿತ್ತು. ನಾನು ಚಿಕ್ಕಮಗಳೂರಿನಲ್ಲಿದ್ದೆ. ಬರುವುದು ತಡವಾಗುತ್ತದೆ ಎಂದು ಅಧ್ಯಕ್ಷರಿಗೆ ಹೇಳಿದ್ದೆ , ಬೆಳಿಗ್ಗೆ 9.30ಕ್ಕೆ ಸಭೆ ನಡೆಸಿದ್ದಾರೆ ಎಂದು ಸಭೆಗೆ ಗೈರಾಗಿದ್ದಕ್ಕೆ ಸ್ಪಷ್ಟನೆ ನೀಡಿದರು.

ಬೆಳಗಾವಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲೂ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದೆ ಎಂದರು.ಸಿದ್ಧರಾಮಯ್ಯ ಅವರೊಟ್ಟಿಗೆ ಕುಳಿತು ಸಭೆ ಮಾಡಿದ್ದೇವೆ. ಸಿದ್ಧರಾಮಯ್ಯ ಅವರಿಗೋಸ್ಕರ ನಾವೇನಿಲ್ಲ. ನಮಗೋಸ್ಕರ ಸಿದ್ಧರಾಮಯ್ಯ ಅವರಿಲ್ಲ. ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೋಸ್ಕರ ಕೆಲಸ ಮಾಡುತ್ತಿದ್ದೇವೆ ಎಂದರು.

ನಾನೂ 8 ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ನೂರಾರು ಸಭೆ ಮಾಡಿದ್ದೇನೆ. ಸಿದ್ದರಾಮಯ್ಯ, ಹರಿಪ್ರಸಾದ್, ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಎಲ್ಲರೂ ಇದ್ದರು. ಯಾವ ಹಿರಿಯ ನಾಯಕರೂ ಆ ರೀತಿ ನಡೆದುಕೊಂಡಿಲ್ಲ ಎಂದರು.ಮುನಿಯಪ್ಪರ ಸೋಲಿಗೆ ಕಾರಣ ಗೊತ್ತಿಲ್ಲ. ಅವರು ಕೆಪಿಸಿಸಿಗೆ ದೂರು ಕೊಟ್ಟಿದ್ದಾರೆ, ನಮ್ಮವರೇ ನನ್ನ ಸೋಲಿಗೆ ಕಾರಣ ಎಂದು ದೂರಿನಲ್ಲಿ ಹೇಳಿದ್ದಾರೆ ಎಂಬುದನ್ನು ತಿಳಿದಿದ್ದೇನೆ.ದೂರು ಪರಿಶೀಲನೆ ಮಾಡಿ ಅಂಥವರ ವಿರುದ್ದ ಅಧ್ಯಕ್ಷರು ಕ್ರಮ ಕೈಗೊಳ್ಳಲಿದ್ದಾರೆಎಂದು ಹೇಳಿದರು.

ADVERTISEMENT

ನಮ್ಮಲ್ಲಿ ವಲಸೆ-ಮೂಲ ಕಾಂಗ್ರೆಸ್ ಎಂದು‌ ಭಾಗ ಇಲ್ಲ. ಎಲ್ಲರೂ ಸಮಾನರು.ಸಿದ್ದರಾಮಯ್ಯ ನವರೂ ಈಗಲೂ ನಮ್ಮ ನಾಯಕರೇ.ಅವರು ವಲಸೆ ಬಂದರೂ ಅವರು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಸಿಎಂ ಆಗಿದ್ದಾರೆ.ನನ್ನಲ್ಲಿನ ಮೃದು ಧೋರಣೆಯಿಂದ ನನಗೆ ಹಿನ್ನಡೆಯಾಗುತ್ರಿದೆ ಅನ್ನೋದು ಸುಳ್ಳು. ನನ್ನ ಮೃಧು‌ ಧೋರಣೆಯಿಂದಲೇ ನಾನು ಉಪಮುಖ್ಯಮಂತ್ರಿ ಆಗಿದ್ದೆ.ಹಾಗಾಗಿ ಯಾವುದೇ ಹಿನ್ನಡೆಯಾಗಿಲ್ಲ ಎಂದರು. ಲೋಕಸಭಾ ಚುನಾವಣೆಯಲ್ಲಿ ಸೋಲಿಗೆ ಸಾಮೂಹಿಕ ಹೊಣೆಗಾರಿಕೆ ಇದೆ. ಯಾರೇ ಒಬ್ಬರು ಕಾರಣರಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.