ADVERTISEMENT

ಮಾಗಡಿ: ಗಜಕರ್ಣ ಗೆಳೆಯರ ಬಳಗದ ಗಣೇಶೋತ್ಸವ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 6:30 IST
Last Updated 10 ಸೆಪ್ಟೆಂಬರ್ 2024, 6:30 IST
ಮಾಗಡಿ ಗಜಕರ್ಣ ಗೆಳೆಯರ ವೇದಿಕೆ ವತಿಯಿಂದ ಎಂಟನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಕೆಂಪಸಾಗರ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್, ನೋಟ್ ಪುಸ್ತಕ  ವಿತರಣೆ ಮಾಡಲಾಯಿತು.
ಮಾಗಡಿ ಗಜಕರ್ಣ ಗೆಳೆಯರ ವೇದಿಕೆ ವತಿಯಿಂದ ಎಂಟನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಕೆಂಪಸಾಗರ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್, ನೋಟ್ ಪುಸ್ತಕ  ವಿತರಣೆ ಮಾಡಲಾಯಿತು.   

ಮಾಗಡಿ: ಗಜಕರ್ಣ ಗೆಳೆಯರ ವೇದಿಕೆ ವತಿಯಿಂದ ಎಂಟನೇ ವರ್ಷದ ಗಣೇಶೋತ್ಸವ ಯಶಸ್ವಿಯಾಗಿ ನಡೆಯಿತು.

ಪಟ್ಟಣದ ಗಿರಿಜಾ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಎಂಟನೇ ವರ್ಷದ ಗಜಕರ್ಣ ಗೆಳೆಯರ ವೇದಿಕೆಯಿಂದ ನಡೆದ ಗಣೇಶೋತ್ಸವಕ್ಕೆ ಶಾಸಕ ಎಚ್.ಸಿ.ಬಾಲಕೃಷ್ಣ ಚಾಲನೆ ನೀಡಿದರು.

ಸತತ ಎಂಟು ವರ್ಷಗಳಿಂದಲೂ ಗೆಳೆಯರೇ ಸೇರಿಕೊಂಡು ದುಡಿಯುವ ಹಣ ಸಂಗ್ರಹಿಸಿ ಯಾರಿಂದಲೂ ಹಣದ ನಿರೀಕ್ಷೆ ಮಾಡಿದೆ ಯುವಕ ಬಳಗದವರೇ ಖರ್ಚು ಮಾಡಿ ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ರೇಖಾ ನವೀನ್, ಜಕರ್ಣ ಗೆಳೆಯರ ಬಳಗದ ಸದಸ್ಯರಾದ ಎಸ್.ಯಶಸ್‌, ಯಶೋಕ್, ರೋಹಿತ್, ದಿನೇಶ್, ವಿನಯ್, ದಿಲೀಪ್, ಚಂದನ್, ದುರ್ಗಾ ಪ್ರಸಾದ್, ಕುಶಾಲ್ ಸೇರಿದಂತೆ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.