ADVERTISEMENT

ವೈಭವದ ಮರುಳಸಿದ್ದೇಶ್ವರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 2:22 IST
Last Updated 1 ಜನವರಿ 2021, 2:22 IST
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗದ್ದುಗೆ ಮಠದ ಶ್ರೀಗುರು ಮರುಳಸಿದ್ದೇಶ್ವರಸ್ವಾಮಿ ಜಾತ್ರೆ ಮಹೋತ್ಸವ ವಿಜೃಂಭಣೆಯಿಂದ ನೆಡೆಯಿತು
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗದ್ದುಗೆ ಮಠದ ಶ್ರೀಗುರು ಮರುಳಸಿದ್ದೇಶ್ವರಸ್ವಾಮಿ ಜಾತ್ರೆ ಮಹೋತ್ಸವ ವಿಜೃಂಭಣೆಯಿಂದ ನೆಡೆಯಿತು   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠದ ಗುರು ಮರುಳಸಿದ್ದೇಶ್ವರಸ್ವಾಮಿ ಜಾತ್ರೆ ಮಹೋತ್ಸವ ಜೃಂಭಣೆಯಿಂದ ನೆಡೆಯಿತು.

ಕುಪ್ಪೂರು ಮಠದಲ್ಲಿ ಡಿಸೆಂಬರ್ 29ರಂದು ಧ್ವಜರೋಹಣದ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. 30ರಂದು ಮಠದ ಗರ್ಭಗುಡಿಯ ಮರುಳಸಿದ್ದರ ಗದ್ದಿಗೆ ಮೇಲಿನ ಲಿಂಗಕ್ಕೆ ಅಭಿಷೇಕ ಸಹಸ್ರ ಬಿಲ್ವಾರ್ಚನೆ ಮಹಾಮಂಗಳಾರತಿ ಪೂಜಾ ವಿಧಾನಗಳು ಬ್ರಾಹ್ಮಿ ಮೂಹೂರ್ತದಲ್ಲಿ ನೆಡೆಯಿತು.

ಮರುಳಪ್ಪಜ್ಜನ ಉತ್ಸವ ಮೂರ್ತಿಯನ್ನು ಬೆಳ್ಳಿ ಅಡ್ಡಪಲ್ಲಕಿಯಲ್ಲಿ ಕೂರಿಸಿ ಮತ್ತು ಸಿಂಗಾರಗೊಂಡ ಬಸವನ ವೃಷಭೋತ್ಸವಕ್ಕೆ ಮಠಾಧ್ಯಕ್ಷರಾದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಜಾತ್ರೆಯ ಮಹಾ ದಾಸೋಹದ ಅನ್ನದ ರಾಶಿಗೆ ಬಸವನ ಪಾದಸ್ಪರ್ಶವು ಮದ್ಯಾಹ್ನ 1.30ಕ್ಕೆ ನೆಡೆಯಿತು.

ADVERTISEMENT

ಹೊನ್ನವಳ್ಳಿ ಮಠದ ಶಿವಪ್ರಕಾಶ ಶಿವಾಚಾರ್ಯಸ್ವಾಮೀಜಿ, ಮಾದಿಹಳ್ಳಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿ, ಮೇಟಿಕುರ್ಕೆ ಮಠದ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರರು ಭಾಗವಹಿಸಿದ್ದರು. ರಾಜ್ಯದ ವಿವಿಧ ಪ್ರದೇಶಗಳಿಂದ ಬಂದಿದ್ದ ಭಕ್ತರು ಸೇರಿ ವಿಜೃಂಭಣೆಯಿಂದ ಜಾತ್ರೆ ಆಚರಿಸಿದರು.

ದೇವರ ಉತ್ಸವದಲ್ಲಿ ನಂಧಿದ್ವಜ, ಲಿಂಗದವಿರರ ಕುಣಿತ, ವೀರಗಾಸೆ, ಕುಣಿತ ಹಾಗೂ ವೀರಶೈವ ಬಿರುದಾವಳಿಗಳು ಭಾಗವಹಿಸಿ
ದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.