ತುಮಕೂರು: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರ ಪರಿಷ್ಕರಣೆ ಮೂಲಕ ಬಡವರು, ಮಧ್ಯಮ ವರ್ಗದ ಜನರಲ್ಲಿ ಉತ್ಸಾಹ ತುಂಬಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ನಗರದಲ್ಲಿ ಸೋಮವಾರ ಬಿಜೆಪಿಯಿಂದ ಆಯೋಜಿಸಿದ್ದ ಜಿಎಸ್‌ಟಿ 2.0 ವಿಜಯೋತ್ಸವದಲ್ಲಿ ಮಾತನಾಡಿದರು.
ಭಾರತದ ಬೆಳವಣಿಗೆಯ ವೇಗ ನಿಯಂತ್ರಿಸಲು ಅಮೆರಿಕದಂತಹ ದೇಶಗಳು ಹೊಂಚು ಹಾಕುತ್ತಿವೆ. ಇದನ್ನು ಮೆಟ್ಟಿ ನಿಲ್ಲಲು ತೆರಿಗೆ ಸುಧಾರಣೆ ಮಹತ್ವದ ಬೆಳವಣಿಗೆಯಾಗಿದೆ. ಇದರಿಂದ ಸ್ವದೇಶಿ ವಸ್ತು ಉತ್ಪಾದನೆ ಮತ್ತು ಬಳಕೆ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಕೆ.ಧನುಷ್, ಮುಖಂಡರಾದ ಟಿ.ಎಚ್.ಹನುಮಂತರಾಜು, ಎಸ್.ಪಿ.ಚಿದಾನಂದ್, ಬ್ಯಾಟರಂಗೇಗೌಡ, ವಿರುಪಾಕ್ಷಪ್ಪ, ರವೀಶಯ್ಯ, ಬಾಲಾಜಿ, ಮಧು, ಕುಮಾರ್, ಶಿವರಾಜು, ಗಂಗೇಶ್, ಅಖಿಲ್, ವೆಂಕಟೇಶ್, ವರ್ತಕರಾದ ಗಿರೀಶ್, ದರ್ಶನ್, ಪ್ರಸನ್ನ, ಪ್ರಶಾಂತ್, ನಂದಕಿಶೋರ್ ಇತರರು ಹಾಜರಿದ್ದರು.
ರಾಜಕಾರಣದ ಹುನ್ನಾರ
ತುಮಕೂರು: ಸರ್ಕಾರ ಹಿಂದೂ ಜಾತಿಗಳಿಗೆ ಕ್ರಿಶ್ಚಿಯನ್ ಎಂದು ಸೇರಿಸಿ ಹೊಸ ಜಾತಿ ಸೃಷ್ಟಿಸಿದೆ. ಹಿಂದೂಗಳನ್ನು ನಾಶ ಮಾಡಲು ಹೊರಟಿದೆ ಎಂದು ಮಾಜಿ ಸಂಸದ ನಾರಾಯಣಸ್ವಾಮಿ ಇಲ್ಲಿ ಸೋಮವಾರ ಆರೋಪಿಸಿದರು.
ಕ್ರಮ ಬದ್ಧತೆ ಇಲ್ಲದ ಸಮೀಕ್ಷೆಯ ಹಿಂದೆ ರಾಜಕಾರಣದ ಹುನ್ನಾರ ಇದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಎಸ್.ಸಿ ಕ್ರೈಸ್ತ ಜಾತಿಗಳನ್ನು ಕೂಡಲೇ ಕೈ ಬಿಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಶಾಸಕ ಬಿ.ಸುರೇಶ್‌ಗೌಡ ‘ಜಿಎಸ್‍ಟಿ ದರ ಪರಿಷ್ಕರಣೆ ನೀತಿ ನವ ಭಾರತ ನಿರ್ಮಾಣಕ್ಕೆ ನಾಂದಿಯಾಗಲಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಆರ್ಥಿಕ ಕ್ರಾಂತಿಯಾಗುತ್ತದೆ’ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಮುಖಂಡರಾದ ವೈ.ಎಚ್.ಹುಚ್ಚಯ್ಯ ಓಂಕಾರ್ ಎಚ್.ಎ.ಆಂಜನಪ್ಪ ಟಿ.ಕೆ.ಧನುಷ್ ವೆಂಕಟೇಶ್ ಮುನಿಯಪ್ಪ ಅಂಜನಮೂರ್ತಿ ಜೆ.ಜಗದೀಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.