ಬಾಲಕಿ
ಗುಬ್ಬಿ: ತಾಲ್ಲೂಕಿನ ತೊರೇಹಳ್ಳಿ ಬೇವಿನಗುಡ್ಡಪ್ಪ ಸ್ವಾಮಿ (ಆಂಜನೇಯ ಸ್ವಾಮಿ) ದೇವಸ್ಥಾನ ಪ್ರವೇಶಿಸಿದ್ದ ಪರಿಶಿಷ್ಟ ಜಾತಿ ಬಾಲಕಿಯನ್ನು ನಿಂದಿಸಿ, ದೇಗುಲದಿಂದ ಹೊರಗಡೆ ಕಳುಹಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
‘ಬೇವಿನಗುಡ್ಡಪ್ಪ ಅಭಿವೃದ್ಧಿ ಟ್ರಸ್ಟ್‌ನವರು ಮಗಳಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬಾಲಕಿಯ ತಾಯಿ ದೊಡ್ಡಮ್ಮ ಗುರುವಾರ ತಹಶೀಲ್ದಾರ್‌ಗೆ ದೂರು ನೀಡಿದ್ದಾರೆ.
‘ದೇವಸ್ಥಾನದಲ್ಲಿ ಹಿಂದಿನಿಂದಲೂ ಪರಿಶಿಷ್ಟರಿಗೆ ಪ್ರವೇಶ ನೀಡುತ್ತಿಲ್ಲ. ಸಮುದಾಯ ಭವನದಲ್ಲಿ ಊಟಕ್ಕೆ ಹೊರಗೆ ಕೂರಿಸುತ್ತಾರೆ. ಜಾತ್ರೆ ವೇಳೆ ದೇವರ ಮೂರ್ತಿಗಳನ್ನು ಪರಿಶಿಷ್ಟರ ಬೀದಿಗೆ ಕಳುಹಿಸುವುದಿಲ್ಲ’ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ದೊಡ್ಡಮ್ಮ,‘ಪೂಜೆಗೆ ಹೋದಾಗ ಮಗಳು ಅಲ್ಲಿದ್ದ ನೀರಿನ ಬಾಟಲಿ ತೆಗೆದುಕೊಂಡಿದ್ದಳು. ಪೂಜೆ ಮಾಡುವವರು, ನೀನು ಒಳಗೆ ಬರಬಾರದು ಎಂದು ತಳ್ಳಿದರು. ನಾವು ಕರೆಯುವ ತನಕ ಬರಬಾರದು. ಹೊರಗೆ ಕುಳಿತುಕೊಳ್ಳಬೇಕು ಎಂದರು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.