ADVERTISEMENT

ಕುಣಿಗಲ್: ಹಳೇವೂರು ಶಾಲೆ ಶತಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:34 IST
Last Updated 24 ಫೆಬ್ರುವರಿ 2026, 6:34 IST
ಕುಣಿಗಲ್ ತಾಲ್ಲೂಕು ಹಳೇವೂರು ಗ್ರಾಮದ ಸರ್ಕಾರಿ ಶಾಲೆ ಶತಮಾನೋತ್ಸವದಲ್ಲಿ ಶಿಕ್ಷಕರನ್ನು ಸತ್ಕರಿಸಲಾಯಿತು
ಕುಣಿಗಲ್ ತಾಲ್ಲೂಕು ಹಳೇವೂರು ಗ್ರಾಮದ ಸರ್ಕಾರಿ ಶಾಲೆ ಶತಮಾನೋತ್ಸವದಲ್ಲಿ ಶಿಕ್ಷಕರನ್ನು ಸತ್ಕರಿಸಲಾಯಿತು   

ಕುಣಿಗಲ್: ತಾಲ್ಲೂಕಿನ ಹಳೇವೂರು ಸರ್ಕಾರಿ ಶಾಲೆ ನೂರು ವರ್ಷಗಳನ್ನು ಪೂರೈಸಿದ ಸ್ಮರಣೆಗಾಗಿ ಹಳೇವೂರು ಶಾಲಾ ಶತಮಾನ ಸಂಭ್ರಮೋತ್ಸವ ನಡೆಯಿತು.

ಪೂರ್ಣಕುಂಭ ಹಾಗೂ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಿತು. ಶಾಂತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸಪ್ತಗಿರಿ ಆಸ್ಪತ್ರೆ ಹಾಗೂ ಲಯನ್ಸ್ ಕ್ಲಬ್ ಬೆಂಗಳೂರು ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದಿಂದ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ನಡೆಯಿತು.

ಶಾಲೆಯಲ್ಲಿ ಕರ್ತವ್ಯನಿರ್ವಹಿಸಿ ನಿವೃತ್ತರಾಗಿರುವ ಶಿಕ್ಷಕರು ಹಾಗೂ ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕರನ್ನು ಸತ್ಕರಿಸಲಾಯಿತು.

ADVERTISEMENT

ಶಾಸಕ ಡಾ.ಎಚ್.ಡಿ. ರಂಗನಾಥ್, ಸರ್ಕಾರಿ ಶಾಲೆಗಳನ್ನು ಉಳಿಸಲು ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಅವುಗಳನ್ನು ಅನುಷ್ಠಾನಗೊಳಿಸುತ್ತೇನೆ ಎಂದರು.

ಹಳೇವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಣ್ಣಯ್ಯ, ಎಚ್.ಕೆ. ನಾಗರಾಜನ್, ರೈತ ಸಂಘ ಜಿಲ್ಲಾಧ್ಯಕ್ಷ ಬೀಚನಹಳ್ಳಿ ಕರಿಗೌಡ, ಸಂಶೋಧಕರಾದ ಅಪ್ಪಾಜಿಗೌಡ, ಶಿವರಾಜ್ ಗೌಡ, ಕೈವಾರ ಶ್ರೀನಿವಾಸ್, ಹುಲಿಯೂರುದುರ್ಗ ಲಕ್ಷ್ಮಿ ನಾರಾಯಣ್, ಎಸ್‌ಡಿಎಂಸಿ ಅಧ್ಯಕ್ಷ ಎಚ್. ಮಲ್ಲೇಶ್, ನಿವೃತ್ತ ಶಿಕ್ಷಕರಾದ ಚನ್ನರಾಯಪ್ಪ, ವೆಂಕಟ ದಾಸಪ್ಪ, ಈಶ್ವರಪ್ಪ, ಶಿವಮ್ಮ, ಚಿಕ್ಕರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.