ADVERTISEMENT

ತುಮಕೂರು ನಗರದಲ್ಲಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 16:30 IST
Last Updated 9 ಆಗಸ್ಟ್ 2020, 16:30 IST
ತುಮಕೂರು ನಗರದಲ್ಲಿ ಭಾನುವಾರ ಮಳೆ ನೀರಿನಿಂದ ಆವೃತವಾದ ರಸ್ತೆಯಲ್ಲಿ ಪ್ರಯಾಣಿಕರು ಸಂಚರಿಸಿದ ದೃಶ್ಯ
ತುಮಕೂರು ನಗರದಲ್ಲಿ ಭಾನುವಾರ ಮಳೆ ನೀರಿನಿಂದ ಆವೃತವಾದ ರಸ್ತೆಯಲ್ಲಿ ಪ್ರಯಾಣಿಕರು ಸಂಚರಿಸಿದ ದೃಶ್ಯ   

ತುಮಕೂರು: ತುಮಕೂರು ನಗರದಲ್ಲಿ ಭಾನುವಾರ ಉತ್ತಮ ಮಳೆ ಆಯಿತು. ಮಧ್ಯಾಹ್ನದ 3 ಗಂಟೆಯ ನಂತರ ಶುರುವಾದ ಮಳೆ ನಡು ನಡುವೆ ಬಿಡುವು ನೀಡುತ್ತ ರಾತ್ರಿಯವರೆಗೂ ಸುರಿಯಿತು. ನಗರದ ಹಲವು ರಸ್ತೆಗಳು ಮಳೆ ನೀರಿನಿಂದ ಆವೃತವಾದವು.

ನಗರದಲ್ಲಿ ಉತ್ತಮ ಮಳೆ ಆದರೆ ಜಿಲ್ಲೆಯ ಹಲವೆಡೆ ತುಂತುರು ಮಳೆ ಸುರಿಯಿತು. ತಿಪಟೂರು, ಕೊರಟಗೆರೆ, ಶಿರಾ, ತುಮಕೂರು ಗ್ರಾಮಾಂತರ, ತುರುವೇಕೆರೆ, ಕುಣಿಗಲ್‌ನಲ್ಲಿ ತುಂತುರು ಮಳೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT