ತುಮಕೂರು: ಮಧುಬಲೆ (ಹನಿಟ್ರ್ಯಾಪ್) ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಸೇರಿದಂತೆ ಯಾವುದೇ ತನಿಖೆ ನಡೆಸುವುದು ಮುಖ್ಯಮಂತ್ರಿ, ಗೃಹ ಸಚಿವರಿಗೆ ಬಿಟ್ಟ ವಿಚಾರ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ಪ್ರಕರಣದ ತನಿಖೆ ನಡೆಯುತ್ತಿದೆ. ಈಗ ಏನು ಮಾತನಾಡುವುದು. ನೋಟಿಸ್ ಕೊಟ್ಟರೆ ಕೊಡಲಿ, ಯಾವ ತನಿಖೆ ಆಗುತ್ತದೋ ಆಗಲಿ. ಕೆಲವು ವಿಚಾರ ಹೇಳಲು ಆಗುವುದಿಲ್ಲ ಎಂದರು.
ನಮ್ನ ಪಕ್ಷ, ಬೇರೆ ಪಕ್ಷದವರು ಪ್ರಯತ್ನ ಮಾಡಿರಬಹುದು. ಬೆಂಗಳೂರು, ಮುಂಬೈನವರೂ ಇರಬಹುದು. ರಾಜಕೀಯೇತರ ವ್ಯಕ್ತಿಗಳು ಮಾಡಿರಬಹುದು. ಯಾರೇ ಮಾಡಿದರೂ ಇದು ಖಂಡನಾರ್ಹ. ಕಾನೂನು ಬಾಹಿರ ಕ್ರಮಕ್ಕೆ ಕುಮ್ಮಕ್ಕು ನೀಡಿದವರಿಗೆ, ಪ್ರಯತ್ನಿಸಿದವರಿಗೆ ದೇವರು ಒಳ್ಳೆಯದು ಮಾಡಲ್ಲ. ಅಂತವರು ಸಾರ್ವಜನಿಕ ಜೀವನದಲ್ಲಿ ಇರಬಾರದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.