ಹುಳಿಯಾರು: ಹೋಬಳಿಯ ಬರಕನಹಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಬಾಲದೇವರಹಟ್ಟಿ ಗ್ರಾಮದ ಸೋಬಾನೆ ಪದಗಾತಿ ಕರಿಯಮ್ಮ ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಘಟಕ ಕೊಡಮಾಡುವ ‘ದಿ.ಸೋಮವತಿ ಮತ್ತು ದಿ. ಇಂದಿರಮ್ಮ’ ನೆನಪಿನ ಸಾಧಕ ಮಹಿಳೆ ಮತ್ತು ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
20ರಂದು ತುಮಕೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕರಿಯಮ್ಮ ಜೀವನವನ್ನೇ ಜನಪದವಾಗಿಸಿಕೊಂಡ ಪದಗಾತಿ. ಜಾನಪದ ಸಾಹಿತ್ಯವನ್ನು ಜೀವನದುದ್ದಕ್ಕೂ ರೂಢಿಸಿಕೊಂಡವರು. ಹೊಲಬದುಕಿನ ಪಾಡು ಹಾಡುಗಳಾಗಿದ್ದು, ಬುಡಕಟ್ಟು ಸೋಬಾನೆ ಪದಗಳನ್ನು ಹಾಡುತ್ತಾರೆ. ಮದುವೆ, ದೇವರ ಕೆಲಸ, ಹಟ್ಟಿ ಮಾರಿಗಳು, ಗ್ರಾಮದೇವತೆ, ಗ್ರಾಮದೈವಗಳ ಕುರಿತು ಪದಕಟ್ಟಿ ಹಾಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.