
ಪ್ರಜಾವಾಣಿ ವಾರ್ತೆ
ಹುಳಿಯಾರು: ಹೋಬಳಿಯ ಕಾರೇಹಳ್ಳಿ ರಂಗನಾಥಸ್ವಾಮಿಯ ಜಾತ್ರೆ ಮತ್ತು ದನಗಳ ಜಾತ್ರೆ ಫೆಬ್ರುವರಿ 26ರಿಂದ ಮಾರ್ಚ್ 5ರ ವರೆಗೆ ನಡೆಯಲಿದೆ.
10 ದಿನ ದನಗಳ ಜಾತ್ರೆ ನಡೆಯುತ್ತದೆ. ಕೆರೆಯ ಅಂಗಳ ಅಂಚಿನಲ್ಲಿ ನೂರಾರು ಏಕರೆ ವಿಶಾಲ ಪ್ರದೇಶ ದನಗಳ ಜಾತ್ರೆಗೆ ಹೇಳಿ ಮಾಡಿಸಿದಂತಿದೆ. ಉತ್ತಮ ನೆರಳು ಹಾಗೂ ನೀರಿಗೆ ಅವಕಾಶವಿರುವುದು ಜಾತ್ರೆಗೆ ಬರುವ ರಾಸುಗಳಿಗೆ ಸಹಕಾರಿಯಾಗಿದೆ. ಜಾತ್ರೆಯಲ್ಲಿ ವಿಶೇಷ ರಾಸುಗಳು ಸೇರಲಿದ್ದು ರಾಜ್ಯದ ವಿವಿಧ ಭಾಗಗಳಿಂದ ರೈತರು ಬರಲಿದ್ದಾರೆ. ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.