
ಹುಳಿಯಾರು: ‘ವಾರದ ಹಿಂದೆ ಕೇಬಲ್ ಕಳ್ಳತನ ಮಾಡಿದ್ದರಿಂದ ನಿನ್ನೆಯಷ್ಟೇ ಸಾಲ ಮಾಡಿ ಮತ್ತೆ ಕೇಬಲ್ ಅಳವಡಿಸಿದ್ದೆ. ಈಗ ಮತ್ತೆ ಕಳ್ಳತನ ಮಾಡಿದ್ದಾರೆ. ಮತ್ತೊಮ್ಮೆ ಹಾಕಲು ದುಡ್ಡು ಎಲ್ಲಿಂದ ತರಲಿ’ ಎಂದು ಸೋಮನಹಳ್ಳಿ ಬಜ್ಯಾನಾಯ್ಕ ಅಳಲುತೋಡಿಕೊಂಡರು.
ಸೋಮನಹಳ್ಳಿ ಹಾಗೂ ರಂಗನಕೆರೆ ಗ್ರಾಮಗಳ 30ಕ್ಕೂ ಹೆಚ್ಚು ರೈತರ ಪಂಪ್‌ಸೆಟ್‌ಗಳ ಕೇಬಲ್ ಬುಧವಾರ ರಾತ್ರಿ ಕಳ್ಳತನವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಕೇಬಲ್ ಜತೆ ನೀರು ಮೇಲೆತ್ತಲು ಬಿಟ್ಟಿರುವ ಕೇಬಲ್ ಸಹ ಹಾಳು ಮಾಡಿದ್ದಾರೆ. ಒಂದೇ ರಾತ್ರಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕೇಬಲ್ ಕಳ್ಳತನವಾಗಿದೆ. ಕಳೆದ ಮೂರು ತಿಂಗಳಿನಲ್ಲಿ ಮೂರು ಬಾರಿ ಕಳ್ಳತನವಾಗಿದೆ. ಪ್ರತಿ ವರ್ಷ ನಾಲ್ಕೈದು ಬಾರಿ ಕಳ್ಳತನವಾಗುತ್ತಿದೆ ಎಂದು ರೈತರು ನೋವು ತೋಡಿಕೊಂಡರು. ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದು ಕೂಡಲೇ ಕಳ್ಳರನ್ನು ಪತ್ತೆ ಹಚ್ಚಿ ಕಳವು ತಪ್ಪಿಸುವಂತೆ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.