ADVERTISEMENT

ತುಮಕೂರಿನಲ್ಲಿ ಹೆಚ್ಚುತ್ತಿದ್ದಾರೆ ಶಂಕಿತರು: ತುಂಬುತ್ತಿವೆ ವಾರ್ಡ್‌ಗಳು

ನಾಲ್ಕೂವರೆ ಸಾವಿರ ದಾಟಿತು ತಪಾಸಣೆಗೆ ಒಳಪಟ್ಟವರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 11 ಮೇ 2020, 15:15 IST
Last Updated 11 ಮೇ 2020, 15:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯ ಐಸೊಲೇಷನ್ ಮತ್ತು ಹಲವು ಕಡೆಗಳಲ್ಲಿರುವ ಕ್ವಾರಂಟೈನ್ ಕೇಂದ್ರಗಳನ್ನು ಸೇರುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೊರೊನಾ ಸೋಂಕಿತರ ಆರೈಕೆಗಾಗಿಯೇ 20 ಹಾಸಿಗೆ ಸಾಮರ್ಥ್ಯದ ಐಸಿಯುವನ್ನು ಸೋಮವಾರ ಉದ್ಘಾಟಿಸಲಾಗಿದೆ.

ಶಂಕಿತರ ಸಂಖ್ಯೆ ಹೆಚ್ಚಿದಂತೆ ಕ್ವಾರಂಟೈನ್ ಕೇಂದ್ರಗಳೂ ಹೆಚ್ಚುತ್ತಿವೆ. ಗಂಟಲುಸ್ರಾವ ಮತ್ತು ಕಫದ ಮಾದರಿ ಪರೀಕ್ಷೆಗೆ ಒಳಪಡುವವರೂ ಹೆಚ್ಚುತ್ತಿದ್ದಾರೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ 4,893 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 4,296 ಮಾದರಿಗಳು ನೆಗೆಟಿವ್ ಬಂದಿವೆ. 548 ಮಾದರಿಗಳ ವರದಿ ಬಾಕಿ ಇದೆ. ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಒಟ್ಟಾರೆ 718 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ.

ಸೀಲ್‌ಡೌನ್ ಸಡಿಲಿಕೆಗೆ ಒತ್ತಾಯ: ಪೂರ್‌ಹೌಸ್ ಕಾಲೊನಿಯಲ್ಲಿ ಸೀಲ್‌ಡೌನ್ ತೆರವುಗೊಳಿಸುವಂತೆ ಕಾಲೊನಿ ಮಹಿಳೆಯರು ಭಾನುವಾರ ಸಂಜೆ ಆಗ್ರಹಿಸಿದ್ದಾರೆ. ಗುಂಪು ಗುಂಪಾಗಿ ರಸ್ತೆಗೆ ಬಂದ ಮಹಿಳೆಯರು ಸೀಲ್‌ಡೌನ್ ತೆರವುಗೊಳಿಸಿ ಎಂದು ಪೊಲೀಸರಲ್ಲಿ ಮನವಿ ಮಾಡಿದರು.

ADVERTISEMENT

ಕಳೆದ 15 ದಿನಗಳಿಂದ ಕಾಲೊನಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಈ ವಾತಾವರಣ ಉಸಿರುಗಟ್ಟಿಸಿದಂತೆ ಆಗಿದ್ದು ಮಹಿಳೆಯರು ಹಾಗೂ ನಾಗರಿಕರು ರೋಸಿ ಹೋಗಿದ್ದಾರೆ. ಮೊದಲು ಬಿಡುಗಡೆಗೊಳಿಸಿ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.