
ಕೊರಟಗೆರೆ: ಪಟ್ಟಣ ಸೇರಿ ವಿವಿಧೆಡೆ ಮೊಬೈಲ್ ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಕಳ್ಳರನ್ನು ಬಂಧಿಸಿರುವ ಪಟ್ಟಣ ಠಾಣೆ ಪೊಲೀಸರು, ₹35 ಲಕ್ಷ ಮೌಲ್ಯದ 137 ಮೊಬೈಲ್ ಜಪ್ತಿ ಮಾಡಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಶಿವಶಂಕರ್ ಅಲಿಯಾಸ್ ಎರುಕಲ ಶಿವಶಂಕರ್ (19), ಅನಂತಪುರದ ಪರಶುರಾಮ್ (22), ತಿರುಪತಿಯ ರಾಮು ಅಲಿಯಾಸ್ ರಾಮಯ್ಯ (19), ಬೆಳಗಾವಿ ಜಿಲ್ಲೆಯ ಗೋಕಾಕ್‌ನ ಪವನ್ (20) ಬಂಧಿತ ಕಳ್ಳರು.
ಫೆ. 6ರಂದು ಕೊರಟಗೆರೆ ಬಸ್ ನಿಲ್ದಾಣದಲ್ಲಿ ತಾಲ್ಲೂಕಿನ ಹೊಳವನಹಳ್ಳಿಯ ಅಶೋಕ ಎಂಬುವರ ಮೊಬೈಲ್ ಕಳುವಾಗಿತ್ತು. ಈ ಕುರಿತು ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೊಬೈಲ್ ಹುಡುಕಾಟಕ್ಕೆ ತನಿಖೆ ಕೈಗೊಂಡಾಗ ಕಳ್ಳರ ಜಾಲ ಪತ್ತೆಯಾಗಿದೆ. ಕಳ್ಳರು ಕೃತ್ಯಕ್ಕೆ ಬಳಿಸಿದ ಕಾರು, 137 ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕೊರಟಗೆರೆ ಇನ್‌ಸ್ಪೆಕ್ಟರ್ ಆರ್.ಪಿ.ಅನಿಲ್, ಪಿಎಸ್‌ಐ ವೈ.ಜಿ.ತೀರ್ಥೇಶ್, ಎಸ್.ಆರ್.ಅಭಿಷೇಕ್, ಸಿಬ್ಬಂದಿ ಗಂಗಾಧರ್, ಪ್ರಸನ್ನಕುಮಾರ್, ಮಹೇಶ್, ಸಂಜೀವರೆಡ್ಡಿ, ದೊಡ್ಡಲಿಂಗಯ್ಯ, ಜಗದೀಶ್ ಕುಮಾರ್, ಪಾಂಡುರಂಗರಾವ್, ರವಿ, ನವೀನ್ ಕುಮಾರ್, ಮಲ್ಲೇಶ್, ಗಣೇಶ್, ಪ್ರಸಾದ್ ಬಾಬು, ದಯಾನಂದ್, ರಮೇಶ್ ಬಾಬು ಅವರ ತಂಡ ಕಾರ್ಯಾಚರಣೆ ನಡೆಸಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.