ತುರುವೇಕೆರೆ: ಪಟ್ಟಣದ ಅಂಬೇಡ್ಕರ್ ರಸ್ತೆಯಲ್ಲಿನ ಗೊಂದಿ ಶ್ರೀಮಾರುತಿ ಜ್ಯೂವೆಲರಿ ಅಂಗಡಿ ಮಾಲೀಕ ಮಂಜುನಾಥ್ ಅಂಗಡಿ ಮುಚ್ಚಿ ನಾಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಸಬಾ ಹೋಬಳಿಯ ಬುಗುಡನಹಳ್ಳಿ ಗ್ರಾಮದ ನಿವಾಸಿ ಹಾಗೂ ಎಪಿಎಂಸಿ ನಿರ್ದೇಶಕರಾದ ಬಿ.ಸಿ.ನಟರಾಜು ಅವರು ತಮ್ಮ ಮಗಳ ಮದುವೆಗೆ ಒಡವೆ ಮಾಡಿಕೊಡಲು ಮಂಜುನಾಥ್ ಅವರಿಗೆ 186 ಗ್ರಾಂನಲ್ಲಿ ಆಭರಣ ಮಾಡಿಕೊಡಲು ₹ 4.80 ಲಕ್ಷ ಹಣವನ್ನು ನೀಡಿದ್ದರು. ಅಲ್ಲದೇ ₹ 2 ಲಕ್ಷ ಮೊತ್ತದ ಚೆಕ್ ನೀಡಿದ್ದರು.
ಮದುವೆ ಸಮೀಪಿಸುತ್ತಿದ್ದಂತೆಯೇ ಜ್ಯೂವೆಲರಿ ಮಾಲೀಕ ಮಂಜುನಾಥ್ ಅವರನ್ನು ಸಂಪರ್ಕಿಸಲು ಮುಂದಾದಾಗ ಅಂಗಡಿ ಮುಚ್ಚಿ ನಾಪತ್ತೆಯಾಗಿರುವುದು ಗೊತ್ತಾಗಿದೆ. ಪಟ್ಟಣ ಪೊಲೀಸ್ ಠಾಣೆಗೆ ನರಸಿಂಹರಾಜು ದೂರು ನೀಡಿದ್ದಾರೆ.
ಆರೋಪಿ ಮಂಜುನಾಥ್ ಇದೇ ರೀತಿ 'ಗೋಲ್ಡ್ ಬೆನಿಫಿಟ್ ಸ್ಕೀಂ' ಹಾಗೂ ಚೀಟಿ ಹೆಸರಿನಡಿ 350 ಜನರಿಂದ ಹಣ ಪಡೆದು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.