
ತುಮಕೂರು: ಜ್ಞಾನಬುತ್ತಿ ಸತ್ಸಂಗ ಕೇಂದ್ರದ ವತಿಯಿಂದ ‘ನಾದೋತ್ಸವ– ರಾಜ್ಯೋತ್ಸವ’ ಕಾರ್ಯಕ್ರಮವನ್ನು ಈಚೆಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಸೋಮೇಶ್ವರ ಬಡಾವಣೆ ವಾಸವಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಗೀತ ವಿದುಷಿ ರೂಪ ನಾಗೇಂದ್ರ ಮಾರ್ಗದರ್ಶನದಲ್ಲಿ ಭಾವಾಲಯ ತಂಡದ ಕಲಾವಿದರು ಕನ್ನಡ ಗೀತೆಗಳನ್ನು ಪ್ರಸ್ತುತ ಪಡಿಸಿ ಪ್ರೇಕ್ಷಕರ ಮನ ಗೆದ್ದರು.
ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಮುರಳೀ ಕೃಷ್ಣಪ್ಪ, ‘ಭಾವಾಲಯದ ಹಿರಿಯ ವಿದ್ಯಾರ್ಥಿಗಳು, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ, ವಿವೇಕಾನಂದ ಇಂಗ್ಲಿಷ್ ಶಾಲೆ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ತಮ್ಮ ಹೃದಯದ ಭಾಷೆಯನ್ನಾಗಿ ಮಾಡಿಕೊಂಡು ಹಾಡುವ ಮೂಲಕ ಎಲ್ಲರ ಮನದಲ್ಲಿ ಕನ್ನಡದ ಹಣತೆ ಬೆಳಗಿಸಿದರು’ ಎಂದು ಹೇಳಿದರು.
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಪ್ರಾಂಶುಪಾಲರಾದ ನಂದಾರಾಜ್, ಸೌಮ್ಯ, ಜಗದೀಶ, ವಿವೇಕಾನಂದ ಶಾಲೆ ಮುಖ್ಯ ಶಿಕ್ಷಕಿ ಕುಸುಮಾ, ಜ್ಞಾನಬುತ್ತಿ ಕೇಂದ್ರದ ನಿರ್ದೇಶಕ ರಮೇಶ್‍ಬಾಬು, ಪ್ರಮುಖರಾದ ಗಂಗಾಧರ ಕೊಡ್ಲಿಯವರ್, ನಾಗೇಂದ್ರ ಪ್ರಣವ್ ಅನಿರುದ್ಧ್, ಬಸವರಾಜಪ್ಪ, ಕೃಷ್ಣಮೂರ್ತಿ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.