
ಪ್ರಜಾವಾಣಿ ವಾರ್ತೆಸಾಂದರ್ಭಿಕ ಚಿತ್ರ
ಕುಣಿಗಲ್: ತಾಲ್ಲೂಕಿನ ಅಮೃತೂರು ಯಾಚನಹಳ್ಳಿ ಗ್ರಾಮದ ಬಳಿ ವೃದ್ಧೆಯೊಬ್ಬರ ರೋಲ್ಡ್ ಗೋಲ್ಡ್ ಸರ ಕದ್ದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಚನ್ನಪಟ್ಟಣದ ಸಲ್ಮಾನ್ ಖಾನ್ ಹಾಗೂ ಸಲೀಂ ಖಾನ್ ಬಂಧಿತರು. ಬಂಧಿತರ ಬಳಿ ಇದ್ದ ರೋಲ್ಡ್ ಗೋಲ್ಡ್ ಚಿನ್ನದ ಸರದ ಜೊತೆಗೆ 4 ಗ್ರಾಂ. ಚಿನ್ನದ ಗುಂಡು ಮತ್ತು ತಾಳಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೃದ್ಧೆ ಮೂಗುರಮ್ಮ ಕಳೆದ ವಾರ ಕಳ್ಳರ ಭಯದಿಂದ ತಮ್ಮ ಬಳಿ ಇದ್ದ 30 ಗ್ರಾಂ ತೂಕದ ಚಿನ್ನದ ಸರವನ್ನು ಮನೆಯಲ್ಲಿಟ್ಟು, ಅದೇ ಮಾದರಿಯ ರೋಲ್ಡ್ ಗೋಲ್ಡ್ ಸರ ಧರಿಸಿದ್ದರು. ಬೈಕ್‌ನಲ್ಲಿ ಬಂದಿದ್ದ ಸಲ್ಮಾನ್ ಮತ್ತು ಸಲೀಂ ರೋಲ್ಡ್ ಗೋಲ್ಡ್ ಕಿತ್ತು ಪರಾರಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.