ADVERTISEMENT

20 ವಯಸ್ಸಿನ ಯುವತಿ ಮದುವೆಯಾಗಿದ್ದ 45ರ ಅಂಕಲ್‌ ಶಂಕರಪ್ಪ ಸೂಸೈಡ್‌ಗೆ ಕಾರಣ ಏನು?

ತನಗಿಂತ ಅರ್ಧ ವಯಸ್ಸಿನ ಯುವತಿಯನ್ನು ಮದುವೆಯಾಗಿದ್ದ ಶಂಕರಪ್ಪ* ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆಗಿದ್ದ ಮದುವೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 14:04 IST
Last Updated 29 ಮಾರ್ಚ್ 2022, 14:04 IST
ಶಂಕರಪ್ಪ, ಮೇಘನಾ ದಂಪತಿ
ಶಂಕರಪ್ಪ, ಮೇಘನಾ ದಂಪತಿ   

ಕುಣಿಗಲ್ (ತುಮಕೂರು ಜಿಲ್ಲೆ): ಕೆಲವು ತಿಂಗಳ ಹಿಂದೆ ತನಗಿಂತ ಅರ್ಧ ವಯಸ್ಸಿನ ಯುವತಿಯನ್ನು ಮದುವೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಹುಲಿಯೂರುದುರ್ಗ ಹೋಬಳಿ ಅಕ್ಕಿಮರಿಪಾಳ್ಯದ ಶಂಕರಪ್ಪ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

45 ವರ್ಷ ವಯಸ್ಸಿನ ಶಂಕರಪ್ಪ ಅವರ ಶವಜಮೀನಿನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಕಳೆದ ಸೆಪ್ಟಂಬರ್‌ನಲ್ಲಿ ಸಂತೆಮಾವತ್ತೂರಿನ ಮೇಘನಾ ಎಂಬ 20 ವರ್ಷದ ಯುವತಿಯನ್ನು ಅವರು ಮದುವೆಯಾಗಿದ್ದರು. ವಯಸ್ಸಿನ ಅಂತರದಿಂದಾಗಿ ಈ ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗಿತ್ತು. ಶಂಕರಪ್ಪ ಅವರನ್ನು ‘ಅಂಕಲ್‌ ಶಂಕರಪ್ಪ’ ಎಂದು ಟ್ರೋಲ್‌ ಮಾಡಲಾಗಿತ್ತು.

ತಾಯಿ ಮತ್ತು ಹೆಂಡತಿಯ ನಡುವಿನ ಕಿತ್ತಾಟಕ್ಕೆ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.‘ಸೊಸೆ ಮೇಘನಾ ಹಲವು ದಿನಗಳಿಂದ ಮಗನೊಂದಿಗೆ ಜಗಳವಾಡುತ್ತಿದಳು’ ಎಂದು ಶಂಕರಪ್ಪ ಅವರ ತಾಯಿ ರಂಗಮ್ಮ ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಂಕರಪ್ಪ ಪತ್ನಿ ಮೇಘನಾ ಸಹ ಪೊಲೀಸರಿಗೆ ದೂರು ನೀಡಿದ್ದಾರೆ. ಹುಲಿಯೂರುದುರ್ಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.