
ಪ್ರಜಾವಾಣಿ ವಾರ್ತೆ
ಕೊಲೆಯಾದ ಮಧುವನ್ (ಒಳಚಿತ್ರದಲ್ಲಿ)
ಶಿರಾ: ತಾಲ್ಲೂಕಿನ ಕಳ್ಳಂಬೆಳ್ಳ ಗ್ರಾಮದ ಜಮೀನಿನಲ್ಲಿ ಗುರುವಾರ ಜಮೀನು ವಿಚಾರಕ್ಕೆ ಜಗಳ ಪ್ರಾರಂಭವಾಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಕಳ್ಳಂಬೆಳ್ಳ ಗ್ರಾಮದ ಮಧುವನ್ (36) ಕೊಲೆಯಾದವರು.
ತುಮಕೂರು ಸಂತೇಪೇಟೆ ನಿವಾಸಿಗಳಾದ ಮಹೇಶ್, ಸಮೀರ್ ಹಾಗೂ ಕಳ್ಳಂಬೆಳ್ಳ ಗ್ರಾಮದ ಮಧುವನ್ ನಡುವೆ ಜಮೀನಿನ ವಿಚಾರವಾಗಿ ಜಗಳ ಪ್ರಾರಂಭವಾಗಿ ಮಾತಿನ ಚಕಮುಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಮಧುವನ್ ಮೇಲೆ ಮಹೇಶ್ ಮಚ್ಚಿನಿಂದ ಹಲ್ಲೆ ನಡೆಸಿದ್ದು ಸ್ಥಳದಲ್ಲೇ ಮಧುವನ್ ಮೃತ ಪಟ್ಟಿದ್ದಾನೆ.
ಕಳ್ಳಂಬೆಳ್ಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.