ಜೈಲು ಶಿಕ್ಷೆ(ಪ್ರಾತಿನಿಧಿಕ ಚಿತ್ರ)
ತಿಪಟೂರು: ಜಮೀನು ಪರಿಹಾರದ ವಿಚಾರಕ್ಕೆ ಕೊಲೆಗೈದ ಅಪರಾಧಿಗೆ ಜೀವಾವದಿ ಶಿಕ್ಷೆ ವಿಧಿಸಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಪುಷ್ಪಾವತಿ ಆದೇಶಿಸಿದ್ದಾರೆ.
ಹೊನ್ನವಳ್ಳಿ ಹೋಬಳಿ ಬಳವನೇರಲು ಗ್ರಾಮದ ಚಂದ್ರಪ್ಪ ಅವರನ್ನು ಅವರ ತಮ್ಮ ಸಣ್ಣರಾಮೇಗೌಡ 8 ಗುಂಟೆ ಜಮೀನಿನ ಗ್ಯಾಸ್‍ಪೈಪ್ ಲೈನ್ ಪರಿಹಾರ ವಿಚಾರಕ್ಕಾಗಿ ಕೊಲೆಗೈದಿದ್ದರು.
ಪ್ರಕರಣ ಸಂಬಂಧ ಗ್ರಾಮಾಂತರ ಪೋಲೀಸ್ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು. ಸಾಕ್ಷಿ ಆಧಾರದಲ್ಲಿ ಸಣ್ಣ ರಾಮೇಗೌಡನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಸರ್ಕಾರಿ ಅಭಿಯೋಜಕ ಬಿ.ಕೆ ನಾಗರತ್ನಮ್ಮ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.