ADVERTISEMENT

ಜೀವರಕ್ಷಕ ಔಷಧಿ ವಿತರಣೆ

​ಪ್ರಜಾವಾಣಿ ವಾರ್ತೆ
Published 31 ಮೇ 2021, 2:30 IST
Last Updated 31 ಮೇ 2021, 2:30 IST
ಆಸ್ಪತ್ರೆಗೆ ಜೆಡಿಎಸ್‌ನಿಂದ ಕೋವಿಡ್ ಜೀವರಕ್ಷಕ ಔಷಧಿ ವಿತರಿಸಲಾಯಿತು
ಆಸ್ಪತ್ರೆಗೆ ಜೆಡಿಎಸ್‌ನಿಂದ ಕೋವಿಡ್ ಜೀವರಕ್ಷಕ ಔಷಧಿ ವಿತರಿಸಲಾಯಿತು   

ತುರುವೇಕೆರೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಜೆಡಿಎಸ್‌ನಿಂದ ಕೋವಿಡ್ ಜೀವರಕ್ಷಕ ಔಷಧಿ ವಿತರಿಸಲಾಯಿತು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಜಿಲ್ಲೆಯ ಹಲವೆಡೆ ಕೋವಿಡ್‍ ರೋಗಿಗಳಿಗೆ ನೀಡುವ ಔಷಧಿ ಅಭಾವಿರುವುದರ ಬಗ್ಗೆ ಕೇಳಿದ್ದೆ. ತಾಲ್ಲೂಕಿನಲ್ಲಿ ನೂರಾರು ಜನರು ಸೋಂಕಿಗೆ ಒಳಗಾಗಿ ಆಸ್ಪತ್ರೆ ಮತ್ತು ಕೋವಿಡ್‍ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅವರ ನೆರವಿಗೆ ಔಷಧಿ ನೀಡಲಾಗಿದೆ ಎಂದರು.

ವೈದ್ಯಕೀಯ ಸಿಬ್ಬಂದಿ ಜನರ ಜೀವ ಕಾಪಾಡಲು ಶಕ್ತಿಮೀರಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್‍ ಸಂಕಷ್ಟಕ್ಕೆ ಸಿಲುಕಿ ಬಡವರು, ಶ್ರಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಸರ್ಕಾರ ಕೂಡಲೇ ಇವರ ನೋವಿಗೆ ಸ್ಪಂದಿಸಬೇಕು ಎಂದರು.

ADVERTISEMENT

ಗ್ರಾಮೀಣ ಪ್ರದೇಶಗಳಲ್ಲಿ ದಿನೇದಿನೇ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ತಾಲ್ಲೂಕು ಆಡಳಿತ ಹೆಚ್ಚು ಪರೀಕ್ಷೆ ನಡೆಸಿ, ಸಕಾಲಕ್ಕೆ ಚಿಕಿತ್ಸೆ ನೀಡಿ, ಜನರಿಗೆ ಜಾಗೃತಿ ಮೂಡಿಸಬೇಕು ಎಂದರು.

ಜೆಡಿಎಸ್‍ ಯುವ ಘಟಕದ ರಾಜ್ಯ ಪ್ರಧಾನ ಕಾಯದರ್ಶಿ ದೊಡ್ಡಾಘಟ್ಟ ಚಂದ್ರೇಶ್‍, ಜೆಡಿಎಸ್ ಅಧ್ಯಕ್ಷ ಸ್ವಾಮಿ, ಎಪಿಎಂಸಿ ಅಧ್ಯಕ್ಷೆ ಛಾಯಾ ಶಂಕರೇಗೌಡ, ಮುಖಂಡರಾದ ಕೊಳಾಲ ಗಂಗಾಧರ್, ವಿಜಯೇಂದ್ರ ಕುಮಾರ್, ಬಾಣಸಂದ್ರ ರಮೇಶ್, ವೆಂಕಟಾಪುರ ಯೋಗೀಶ್, ಹನುಮಂತಯ್ಯ, ಶಂಕರೇಗೌಡ, ಪೆಯಿಂಟ್‍ ರಂಗನಾಥ್, ಟಿಎಚ್ಒ ಡಾ.ಸುಪ್ರಿಯಾ, ಡಾ.ಶ್ರೀಧರ್, ಡಾ.ನವೀನ್, ಡಾ.ಡಿ.ಪವನ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.