ADVERTISEMENT

‘ಲಿಂಗಾಯತ’ ಜಾತ್ಯತೀತ ಧರ್ಮ

ವಿಭೂತಿ, ರುದ್ರಾಕ್ಷಿ ವಸ್ತು ಪ್ರದರ್ಶನದಲ್ಲಿ ನೋಡಬೇಕಾದಿತ್ತು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 6:23 IST
Last Updated 28 ಸೆಪ್ಟೆಂಬರ್ 2025, 6:23 IST
<div class="paragraphs"><p>ತುಮಕೂರಿನಲ್ಲಿ ಶನಿವಾರ ರಾಜ್ಯ ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ&nbsp;ಲೇಖಕಿ ಶೈಲಾ ನಾಗರಾಜು ರಚನೆಯ ‘ಬಸವ ಸಂಸ್ಕೃತಿ’ ಕಿರು ಹೊತ್ತಿಗೆ ಬಿಡುಗಡೆಗೊಳಿಸಲಾಯಿತು. ಸಾಣೇಹಳ್ಳಿ ತರಳಬಾಳು </p></div>

ತುಮಕೂರಿನಲ್ಲಿ ಶನಿವಾರ ರಾಜ್ಯ ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಲೇಖಕಿ ಶೈಲಾ ನಾಗರಾಜು ರಚನೆಯ ‘ಬಸವ ಸಂಸ್ಕೃತಿ’ ಕಿರು ಹೊತ್ತಿಗೆ ಬಿಡುಗಡೆಗೊಳಿಸಲಾಯಿತು. ಸಾಣೇಹಳ್ಳಿ ತರಳಬಾಳು

   

ತುಮಕೂರು: ಶರಣರು ವೈದಿಕ ಧರ್ಮದ ಆಚರಣೆಗಳಿಂದ ಹಿಂದೆ ಸರಿಯದಿದ್ದರೆ ಲಿಂಗಾಯತರಿಗೆ ಉಳಿಗಾಲವಿಲ್ಲ ಎಂದು ಮುಂಡರಗಿಯ ತೋಂಟದಾರ್ಯ ಮಠ ಹಾಗೂ ಬೈಲೂರು ನಿಷ್ಕಲ ಮಂಟಪದ ನಿಜಗುಣ ಪ್ರಭು ಸ್ವಾಮೀಜಿ ಹೇಳಿದರು.

ನಗರದಲ್ಲಿ ಶನಿವಾರ ರಾಜ್ಯ ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.

ADVERTISEMENT

ಲಿಂಗಾಯತ ಧರ್ಮವೂ ತನ್ನ ಆಚರಣೆಯ ಮೇಲೆ ನಿಲ್ಲಬೇಕಾಗಿದೆ. ಇದೊಂದು ಜಾತ್ಯತೀತ ಧರ್ಮ. ಎಲ್ಲ ಕಾಯಕ ಸಮುದಾಯಗಳಿಗೆ ಸಮಾನತೆ ನೀಡಿದ, ಪ್ರಜಾಪ್ರಭುತ್ವದ ತಳಹದಿಯ ಮೇಲೆ ಲಿಂಗಾಯತ ಧರ್ಮ ನಿಂತಿದೆ. ಲಿಂಗಾಯತರು ಬದಲಾಗದಿದ್ದರೆ, ನಮ್ಮ ವಿಭೂತಿ, ರುದ್ರಾಕ್ಷಿಯನ್ನು ವಸ್ತು ಪ್ರದರ್ಶನದಲ್ಲಿ ನೋಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಾಣೆಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಸರ್ಕಾರ ನಡೆಸುತ್ತಿರುವ ಆರ್ಥಿಕ, ಸಾಮಾಜಿಕ ಸಮೀಕ್ಷೆಯಲ್ಲಿ ಲಿಂಗಾಯತರು ಧರ್ಮದ ಕಾಲಂನಲ್ಲಿ ಲಿಂಗಾಯತ, ಜಾತಿಯಲ್ಲಿ ನಿಮ್ಮ ಜಾತಿ ಬರೆಸಬೇಕು. ಕೆಲವರು ಆರೋಪಿಸುವಂತೆ ನಾವು ಧರ್ಮವನ್ನು ಒಡೆಯುತ್ತಿಲ್ಲ. ಒಂದು ಗೂಡಿಸುವ ಕೆಲಸ ಮಾಡುತಿದ್ದೇವೆ’ ಎಂದು ತಿಳಿಸಿದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ‘ಇಂದಿಗೂ, ಎಂದೆಂದಿಗೂ ಬಸವಣ್ಣನವರ ವಿಚಾರಗಳು ಜನತೆಗೆ ಬೇಕಾಗಿದೆ. ಆಧುನಿಕ ಭಾರತದ ಸಮಸ್ಯೆಗಳ ಪರಿಹಾರ ಬಸವ ತತ್ವದಲ್ಲಿದೆ’ ಎಂದರು.

ಲೇಖಕಿ ಶೈಲಾ ನಾಗರಾಜು ರಚನೆಯ ‘ಬಸವ ಸಂಸ್ಕೃತಿ’ ಕಿರು ಹೊತ್ತಿಗೆ ಬಿಡುಗಡೆಗೊಳಿಸಲಾಯಿತು. ಬಾಲ್ಕಿಯ ಬಸವಲಿಂಗ ಪಟ್ಟದೇವರು, ಬೆಟ್ಟದಹಳ್ಳಿಯ ಚಂದ್ರಶೇಖರ ಸ್ವಾಮೀಜಿ, ಕೂಡಲ ಸಂಗಮದ ಗಂಗಾ ಮಾತಾಜಿ, ಗದಗದ ತೊಂಟದ ಸಿದ್ದರಾಮ ಸ್ವಾಮೀಜಿ, ತಮ್ಮಡಿಹಳ್ಳಿಯ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಕಾರದ ವೀರ ಬಸವ ಸ್ವಾಮೀಜಿ, ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ತಿಪಟೂರಿನ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.