ADVERTISEMENT

ಕುಣಿಗಲ್‌: ತಾಲ್ಲೂಕು ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 14:16 IST
Last Updated 12 ಸೆಪ್ಟೆಂಬರ್ 2024, 14:16 IST
ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿ ಶಿವರುದ್ರಪ್ಪ ಮೇಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿ ಶಿವರುದ್ರಪ್ಪ ಮೇಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಕುಣಿಗಲ್: ತಾಲ್ಲೂಕು ಆಸ್ಪತ್ರೆಗೆ ಗುರುವಾರ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ದಾಖಲೆಗಳನ್ನು ವಶಕ್ಕೆ ಪಡೆದರು.

ಬುಧವಾರ ಸಂಜೆ ಭೇಟಿ ನೀಡಿದ್ದ ಅಧಿಕಾರಿಗಳ ತಂಡ ಲೆಕ್ಕಪತ್ರಗಳ ದಾಖಲೆ ಪರಿಶೀಲಿಸಿದ್ದು, ಔಷಧ ಉಗ್ರಾಣ ಮತ್ತು ಸಂಗ್ರಹಾಲಯಗಳಿಗೆ ಬೀಗ ಹಾಕಿ ವಶಕ್ಕೆ ಪಡೆದಿದ್ದರು. ಗುರುವಾರ ಬೆಳಿಗ್ಗೆ ಪರಿಶೀಲನೆ ಮುಂದುವರೆಸಿದರು.

ಹಣಕಾಸು, ಆಯುಷ್ಮಾನ್ ಭಾರತ್ ಯೋಜನೆ, ಔಷಧಿ ಖರೀದಿ ಮತ್ತು ಉಪಯೋಗಿಸಿರುವ ದಾಖಲೆಗಳನ್ನು ಪರಿಶೀಲಿಸಿದ್ದು, ತಾಳೆಯಾಗದ ಕಾರಣ ದಾಖಲೆಗಳನ್ನು ವಶಕ್ಕೆ ಪಡೆದು ತೆರಳಿದರು.

ADVERTISEMENT

ತಂಡದಲ್ಲಿ ಡಿವೈಎಸ್‌ಪಿ ಉಮಾಶಂಕರ್, ಇನ್‌ಸ್ಪೆಕ್ಟರ್‌ ಶಿವರುದ್ರಪ್ಪ ಮೇಟಿ, ಸುರೇಶ, ಮಹಮ್ಮದ್ ಸಲೀಂ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.