ADVERTISEMENT

ತುಮಕೂರು: ಹಾಲು ಖರೀದಿ ದರ ಲೀಟರ್‌ಗೆ ₹ 2 ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 11:40 IST
Last Updated 30 ಜನವರಿ 2021, 11:40 IST
   

ತುಮಕೂರು: ಜಿಲ್ಲೆಯಲ್ಲಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್‌ಗೆ ₹ 2 ಹೆಚ್ಚಳ ಮಾಡಿದ್ದು, ಫೆ. 1ರಿಂದ ಜಾರಿಗೆ ಬರಲಿದೆ.

ಕೊವಿಡ್–19 ಸಂಕಷ್ಟದ ಸಮಯದಲ್ಲಿ ಹಾಲು ಖರೀದಿ ದರವನ್ನು ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) ಕಡಿಮೆ ಮಾಡಿತ್ತು. ಈಗ ಮಾರುಕಟ್ಟೆ ಚೇತರಿಸಿದ್ದು, ಹಾಲು ಮಾರಾಟ ಹೆಚ್ಚಳವಾಗಿದೆ. ಪೌಡರ್, ಬೆಣ್ಣೆಗೂ ಬೇಡಿಕೆ ಬಂದಿದ್ದು, ಒಕ್ಕೂಟದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಹಾಗಾಗಿ ಹಾಲು ಖರೀದಿ ಬೆಲೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ತಿಳಿಸಿದರು.

3.5 ಜಿಡ್ಡಿನಾಂಶ ಇರುವ ಹಾಲಿಗೆ ಲೀಟರ್‌ಗೆ ₹ 25 ಹಾಗೂ 4.1 ಜಿಡ್ಡಿನಾಂಶದ ಹಾಲಿಗೆ ₹ 26.28ರಂತೆ ಖರೀದಿ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.