ADVERTISEMENT

ಜನರ ನಿದ್ದೆ ಕಸಿದ ಆರಿದ್ರಾ

ತಿಪಟೂರಿನಲ್ಲಿ 83 ಮಿ.ಮೀ. ಮಳೆ; ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 8:29 IST
Last Updated 27 ಜೂನ್ 2020, 8:29 IST
ತಿಪಟೂರಿನ ವಿನಾಯಕ ನಗರದಲ್ಲಿ ಗುರುವಾರ ತಡರಾತ್ರಿ ಸುರಿದ ಮಳೆಗೆ ಮನೆಗಳಿಗೆ ನೀರು ನುಗ್ಗಿತ್ತು
ತಿಪಟೂರಿನ ವಿನಾಯಕ ನಗರದಲ್ಲಿ ಗುರುವಾರ ತಡರಾತ್ರಿ ಸುರಿದ ಮಳೆಗೆ ಮನೆಗಳಿಗೆ ನೀರು ನುಗ್ಗಿತ್ತು   

ತಿಪಟೂರು: ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಆರಂಭವಾದ ಮಳೆ ನಗರ ವಾಸಿಗಳ ನಿದ್ದೆ ಕೆಡಿಸಿತು. ಚರಂಡಿ ತುಂಬಿ ರಸ್ತೆಗಳಲ್ಲೆಲ್ಲಾ ಹರಿದ ನೀರು ಅಂಗಡಿ, ಮನೆಗಳಿಗೆ ನುಗ್ಗಿತು.

ಗುರುವಾರ ರಾತ್ರಿ 9.30ಕ್ಕೆ ಆರಂಭವಾದ ಮಳೆ ಶುಕ್ರವಾರ ಬೆಳೆಗ್ಗೆ 4 ರವರೆಗೆ ಸುರಿಯಿತು. ನಗರದಲ್ಲಿ 83.6 ಮಿ.ಮೀ ಮಳೆಯಾದರೆ, ತಾಲ್ಲೂಕಿನಲ್ಲಿ ಸರಾಸರಿ 41.71 ಮಿ.ಮೀ ಮಳೆಯಾಯಿತು.

ಗಾಂಧಿನಗರ, ಇಂದಿರಾನಗರ, ವಿನಾಯಕ ನಗರ ಸೇರಿದಂತೆ ಹಲವು ಬಡವಾಣೆಗಳಲ್ಲಿ ಚರಂಡಿ, ಒಳ ಚರಂಡಿ ತುಂಬಿ ರಾಜಕಾಲುವೆಗಳಿಂದ ಹೊರ ಬಂದು ನೀರು ರಸ್ತೆ ಮೇಲೆ ಹರಿಯಿತು. ಎನ್‌.ಎಚ್‌ 206ರಲ್ಲಿ ಪಾದಚಾರಿ ಮಾರ್ಗ, ರಸ್ತೆ ವಿಭಜಕಗಳು ತಿಳಿಯದಂತೆ ನೀರು ನಿಂತು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ADVERTISEMENT

ಕೋಡಿ ವೃತ್ತದಿಂದ ಬೆಂಗಳೂರು ಮಾರ್ಗವಾಗಿ ತೆರಳುವ ಎನ್.ಎಚ್. 206ರಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ ರಸ್ತೆಯಲ್ಲಿ ನೀರು ನಿಂತಿದ್ದು, ವಾಹನ ಸಂಚಾರ ಕಷ್ಟವಾಗಿತ್ತು.

ನಗರದ ಹಲವು ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿತ್ತು. ನಗರಸಭೆ ಆಯುಕ್ತ ಉಮಾಕಾಂತ್ ರಾತ್ರಿಯಿಡಿ ಸಂಚರಿಸಿ ಕಟ್ಟಿಕೊಂಡಿದ್ದ ಚರಂಡಿಗಳನ್ನು ತೆರವುಗೊಳಿಸಿದರು. ಕೆಲ ಸ್ಥಳಗಳಿಗೆ ಶಾಸಕ ಬಿ.ಸಿ. ನಾಗೇಶ್ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.