ADVERTISEMENT

ಟಿಪ್ಪು ಪ್ರತಿಮೆಗೆ ಮುಸ್ಲಿಮರೇ ಒಪ್ಪಲ್ಲ: ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 20:58 IST
Last Updated 13 ನವೆಂಬರ್ 2022, 20:58 IST
   

ತುಮಕೂರು: ವಿಗ್ರಹ ಆರಾಧನೆಯನ್ನು ಮುಸ್ಲಿಂ ಧರ್ಮದವರು ಒಪ್ಪುವುದಿಲ್ಲ. ಟಿಪ್ಪು ಸುಲ್ತಾನ್‌ ಪ್ರತಿಮೆ ನಿರ್ಮಿಸಲು ರಾಜ್ಯದ ಜನತೆಯೂ ಒಪ್ಪಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಕುಣಿಗಲ್‌ ತಾಲ್ಲೂಕಿನ ಎಡೆಯೂರಿನಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ತನ್ವಿರ್‌ ಸೇಠ್‌ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಅವರು ವೈಯಕ್ತಿಕವಾಗಿ ಏನಾದರೂ ಮಾಡಿಕೊಳ್ಳಲಿ. ಸಾರ್ವಜನಿಕವಾಗಿ ಪ್ರತಿಮೆ ನಿರ್ಮಾಣ ಮಾಡಲು ಮುಸ್ಲಿಮರೇ ಒಪ್ಪಲ್ಲ ಎಂದರು.

ಸಿದ್ದರಾಮಯ್ಯ ಅವರಿಗೆ ಕೋಲಾರವೂ ಸುರಕ್ಷಿತಅಲ್ಲ. ಅವರು ಚಿಕ್ಕನಾಯಕನಹಳ್ಳಿಗೆ ಬಂದರೆ ಸ್ವಾಗತಿಸುತ್ತೇನೆ. ತವರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಗೆಲುವು ಸಿಗುವುದಿಲ್ಲ ಎನ್ನುವುದು ಕಳೆದ ಬಾರಿ ಸಾಬೀತಾಗಿದೆ. ಹಾಗಾಗಿ ಅವರು ಬೇರೆ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ ಎಂದೂ ಹೇಳಿದರು.

ADVERTISEMENT

*

ಸಿದ್ದರಾಮಯ್ಯ ಅವರು ಇದ್ದ ಕ್ಷೇತ್ರ ಬಿಟ್ಟು ಬೇರೆ ಕಡೆ ಯಾಕೆ ಹೋಗುತ್ತಿದ್ದಾರೆ ಅಂತಾ ನಮಗೆ ಅರ್ಥವಾಗುತ್ತಿಲ್ಲ. ತವರು ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡದೆ, ಬೇರೆ ಜಾಗ ಹುಡುಕುತ್ತಿದ್ದಾರೆ.
-ಬಿ.ಎಸ್‌.ಯಡಿಯೂರಪ್ಪ, ಶಾಸಕ

*

ವಿನಾಶಕಾಲೇ ವಿಪರೀತ ಬುದ್ಧಿ. ಕಾಂಗ್ರೆಸ್‌ ಇಡೀ ದೇಶದಲ್ಲಿ ವಿನಾಶದತ್ತ ಹೋಗುತ್ತಿದೆ. ಶಾಸಕ ತನ್ವೀರ್‌ ಸೇಠ್ ಅವರ ಹೇಳಿಕೆ ಕಾಂಗ್ರೆಸ್‌ ಅಭಿಪ್ರಾಯವಾಗಿರುತ್ತದೆ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.