ADVERTISEMENT

ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೇಡ: ಡಿ. ಕೃಷ್ಣಕುಮಾರ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 6:42 IST
Last Updated 18 ಅಕ್ಟೋಬರ್ 2021, 6:42 IST
ಕುಣಿಗಲ್‌ನಲ್ಲಿ ನಡೆದ ಟೌನ್ ವಿವಿಧೊದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ಮಹಾಸಭೆಯಲ್ಲಿ ಪಿಎಲ್‌ಡಿ ಬ್ಯಾಂಕ್ ರಾಜ್ಯ ಘಟಕದ ಅಧ್ಯಕ್ಷ ಡಿ. ಕೃಷ್ಣಕುಮಾರ್ ಮಾತನಾಡಿದರು. ಅಧ್ಯಕ್ಷ ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ಶಿವಣ್ಣ, ನಿರ್ದೇಶಕರಾದ ಇ. ಮಂಜು, ವೆಂಕಟೇಶ, ಉಪಾಧ್ಯಕ್ಷ ಅನೂಪಕುಮಾರ್ ಹಾಜರಿದ್ದರು

ಕುಣಿಗಲ್: ‘ಸಹಕಾರ ಸಂಘಗಳಲ್ಲಿ ರಾಜಕೀಯದಿಂದಾಗಿ ಮೂಲ ಉದ್ದೇಶ ಮರೆಯಾಗಿ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ರಾಜಕಾರಣದಿಂದ ಸಂಘಗಳು ಅವನತಿಯ ಹಾದಿ ಹಿಡಿಯುತ್ತಿರುವ ಕಾರಣ ರಾಜಕೀಯ ರಹಿತವಾಗಿ ಬೆಳೆಯಬೇಕು’ ಎಂದು ಪಿಎಲ್‌ಡಿ ಬ್ಯಾಂಕ್ ರಾಜ್ಯ ಘಟಕದ ಅಧ್ಯಕ್ಷ ಡಿ. ಕೃಷ್ಣಕುಮಾರ್ ಕರೆ ನೀಡಿದರು.

ಇಲ್ಲಿನ ಟೌನ್‌ ವಿವಿಧೊದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಹಕಾರ ಸಂಘ ನಿವೃತ್ತ ಶಿಕ್ಷಕ ಶ್ರೀನಿವಾಸ್ ಗೌಡ ಸೇರಿದಂತೆ ಅನೇಕ ಸಹಕಾರಿ ಧುರೀಣರ ಮಾರ್ಗದರ್ಶನದಲ್ಲಿ ನೂರು ವರ್ಷ ಪೂರೈಸಿದೆ. ಆಡಳಿತ ಮಂಡಳಿಯವರು ಆರ್ಥಿಕ ಚಟುವಟಿಕೆ ಹೆಚ್ಚಿಸಿಕೊಂಡು ಬಡ ವ್ಯಾಪಾರಿಗಳಿಗೆ ನೆರವು ನೀಡಬೇಕು. ವ್ಯಾಪಾರಿಗಳು ಸಂಘದ ಪ್ರಗತಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ಶಿವಣ್ಣ, ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಅನೂಪಕುಮಾರ್, ನಿರ್ದೇಶಕರಾದ ಮಹೇಶ, ವೆಂಕಟೇಶ್, ಈ. ಮಂಜು, ಆನಂದ್ ಸಿಂಗ್, ರಾಘವೇಂದ್ರ, ದಿನೇಶ್, ಎಲ್ಲೆಗೌಡ, ಸಂಪತ್, ನರ್ಮದಾ ದೇವಿ, ರೇವಮ್ಮ, ಕಾರ್ಯದರ್ಶಿ ರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.