ತಿಪಟೂರು: ನಗರದ 26ನೇ ವಾರ್ಡ್‌ನ ಲಕ್ಷ್ಮಿ ಚಿತ್ರಮಂದಿರ ಹಿಂಬಾಗದ ರಂಗಾಪುರ ರಸ್ತೆಯ 2ನೇ ಅಡ್ಡರಸ್ತೆಯಲ್ಲಿ ನಗರಸಭೆಯಿಂದ ಐದು ತಿಂಗಳ ಹಿಂದೆ ರಸ್ತೆಯಲ್ಲಿ ಕೊಳವೆ ಬಾವಿ ಕೊರೆಸಿದ್ದು, ಅದು ಇದು ಬಾಯ್ತೆರೆದುಕೊಂಡಿದೆ. ಅದಕ್ಕೆ ಅಳವಡಿಸಿದ್ದ ಪರಿಕರಗಳನ್ನು ತೆಗೆದಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಕೊಳವೆ ಬಾವಿಗೆ ಅಳವಡಿಸಿರುವ ಪೈಪ್ ಅನ್ನು ಎತ್ತರಕ್ಕೆ ಬಿಡಲಾಗಿದೆ. ಯಾವುದೇ ಮುಚ್ಚಳ ಆಳವಡಿಸಿಲ್ಲ. ಮಕ್ಕಳು ಆಟವಾಡುವಾಗ ತೊಂದರೆಯಾಗುತ್ತಿದ್ದು, ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ ಎಂದು ಎಂದು ನಗರನಿವಾಸಿಗಳು ದೂರಿದ್ದಾರೆ.
ದುರಂತ ಸಂಭವಿಸುವ ಮುನ್ನ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತೆರೆದ ಕೊಳವೆಬಾವಿ ಬಗ್ಗೆ ನಗರಸಭೆ ಪೌರಯುಕ್ತರಿಗೆ ಹತ್ತಾರು ಬಾರಿ ಹೇಳಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಗರಸಭೆ ಸದಸ್ಯ ನಹೀಂ ಪಾಷ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.