ADVERTISEMENT

ಪಾವಗಡ: ಕಾರು-ಬಸ್‌ ಮಧ್ಯೆ ಅಪಘಾತ; ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 6:26 IST
Last Updated 20 ಡಿಸೆಂಬರ್ 2025, 6:26 IST
<div class="paragraphs"><p>ಅಪಘಾತಕ್ಕೀಡಾದ ಕಾರು</p></div>

ಅಪಘಾತಕ್ಕೀಡಾದ ಕಾರು

   

ಪಾವಗಡ: ತಾಲ್ಲೂಕಿನ ಕಡಮಲಕುಂಟೆ ಬಳಿಯ ಪೆನುಗೊಂಡ- ಪಾವಗಡ ರಸ್ತೆಯಲ್ಲಿ ಶನಿವಾರ ಕಾರು- ಆಂಧ್ರಪ್ರದೇಶದ ಸರ್ಕಾರಿ ಬಸ್‌ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಮೇಡಿಹಳ್ಳಿ ಗ್ರಾಮದ ರಾಜಶೇಖರರೆಡ್ಡಿ (38) ಮೃತರು. ಪಟ್ಟಣದಿಂದ ಆಂಧ್ರದ ಧರ್ಮವರಂಗೆ ಹೋಗುತ್ತಿದ್ದ ಇನ್ನೋವಾ ಕಾರು, ಪೆನುಗೊಂಡ ಕಡೆಯಿಂದ ಪಟ್ಟಣದ ಕಡೆಗೆ ಬರುತ್ತಿದ್ದ ಎಪಿಎಸ್‌ಆರ್‌ಟಿಸಿ ಬಸ್‌ ಮುಖಾಮುಖಿಯಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ.

ADVERTISEMENT

ಈ ರಸ್ತೆಯಲ್ಲಿ ತಿರುವುಗಳು ಹೆಚ್ಚಿವೆ. ಅನಂತಪುರಂ, ಪೆನುಗೊಂಡ, ಧರ್ಮವರಂ, ಬೆಂಗಳೂರಿಗೆ ಹೋಗುವವರು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದ್ದು, ಸಾವು–ನೋವುಗಳ ಪ್ರಮಾಣವೂ ಜಾಸ್ತಿಯಾಗುತ್ತಿದೆ. ವೇಗ ನಿಯಂತ್ರಿಸುವ ಸಲುವಾಗಿ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಡಮಲಕುಂಟೆ, ಕೊಡಮಡುಗು, ಟಿ.ಎನ್.ಪೇಟೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.