ADVERTISEMENT

ಪಾವಗಡ: ಕೆರೆ ಸಂರಕ್ಷಣೆಗೆ ಆಗ್ರಹಿಸಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 6:04 IST
Last Updated 9 ಡಿಸೆಂಬರ್ 2025, 6:04 IST
ಪಾವಗಡ ತಹಶೀಲ್ದಾರ್‌ ಕಚೇರಿ ಮುಂಭಾಗ ಸೋಮವಾರ ಕೆರೆಗಳ ಹೂಳೆತ್ತಬೇಕು, ಕೆರೆ ಕಟ್ಟೆ ಸರಿಪಡಿಸಿ, ತೂಬುಗಳ ದುರಸ್ತಿ ಮಾಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು
ಪಾವಗಡ ತಹಶೀಲ್ದಾರ್‌ ಕಚೇರಿ ಮುಂಭಾಗ ಸೋಮವಾರ ಕೆರೆಗಳ ಹೂಳೆತ್ತಬೇಕು, ಕೆರೆ ಕಟ್ಟೆ ಸರಿಪಡಿಸಿ, ತೂಬುಗಳ ದುರಸ್ತಿ ಮಾಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು   

ಪಾವಗಡ: ತಾಲ್ಲೂಕಿನ ಕೆರೆಗಳ ಹೂಳು ತೆಗೆದು ಹೆಚ್ಚಿನ ಪ್ರಮಾಣದ ನೀರು ನಿಲ್ಲುವ ವ್ಯವಸ್ಥೆ ಮಾಡಬೇಕು. ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ರೈತರು ಸೋಮವಾರ ತಹಶೀಲ್ದಾರ್‌ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನಾದ್ಯಂತ ನೂರಾರು ವರ್ಷಗಳಿಂದ ಇರುವ ಕೆರೆಗಳು ರೈತರ ಜೀವಾಳವಾಗಿವೆ. ಆದರೆ ಕೆರೆಗಳಲ್ಲಿ ಹೂಳು ತುಂಬಿಕೊಂಡಿದ್ದು ಹೆಚ್ಚಿನ ನೀರು ಸಂಗ್ರಹವಾಗಲು ಅಡ್ಡಿಯಾಗಿದೆ. ಕೆರೆ ಕಟ್ಟೆಗಳು ಶಿಥಿಲಾವಸ್ಥೆ ತಲುಪಿವೆ. ತೂಬುಗಳು ಹಾಳಾಗಿವೆ ಇದರಿಂದ ಕೆರೆಗಳಲ್ಲಿ ನೀರು ನಿಲ್ಲದೆ ಪೋಲಾಗುತ್ತಿವೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಪೂಜಾರಪ್ಪ ಆರೋಪಿಸಿದರು.

ತಾಲ್ಲೂಕಿನ ಕೆರೆಗಳಿಗೆ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆಯಡಿ ನೀರು ತುಂಬುವ ಯೋಜನೆ ಪ್ರಗತಿಯಲ್ಲಿದೆ. ಆದರೆ ಈಗಿರುವ ಕೆರೆಗಳ ಸ್ಥಿತಿ ಸುಧಾರಿಸದಿದ್ದಲ್ಲಿ ಯೋಜನೆ ವಿಫಲವಾಗುವುದರಲ್ಲಿ ಸಂದೇಹವಿಲ್ಲ ಎಂದು ದೂರಿದರು.

ADVERTISEMENT

ಕೂಡಲೇ ಕೆರೆಗಳಲ್ಲಿ ವೈಜ್ಞಾನಿಕವಾಗಿ ಹೂಳು ತೆಗೆಯುವ ಕೆಲಸವಾಗಬೇಕು. ಹಾಳಾಗಿರುವ ಕೆರೆಕಟ್ಟೆಗಳನ್ನು ಸರಿಪಡಿಸಬೇಕು. ತೂಬುಗಳ ದುರಸ್ತಿ ಮಾಡಿಸಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಶಿವು, ಪೂಜಾರಿ ಚಿತ್ತಯ್ಯ, ಚಿಕ್ಕಣ್ಣ, ಕೃಷ್ಣಪ್ಪ, ಅಕ್ಕಲಪ್ಪ, ಕೃಷ್ಣಮೂರ್ತಿ, ಸಿದ್ದಪ್ಪ, ರಾಮಕೃಷ್ಣನಾಯಕ, ಬೋರಣ್ಣ, ನಾಗಪ್ಪ, ಆಂಜನೇಯುಲು, ಲಾಲುಸ್ವಾಮಿ, ಹನುಮಂತರಾಯಪ್ಪ, ಗೋಪಾಲ, ನಾಗೇಂದ್ರಪ್ಪ, ಶನಿವಾರಪ್ಪ, ಹೊನ್ನೂರಪ್ಪ, ವೆಂಕಟರವಣಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.