ADVERTISEMENT

ಪಾವಗಡ | ಚಿತ್ರಲಿಂಗೇಶ್ವರ ಉತ್ಸವ: ಅಹೋರಾತ್ರಿ ಹರಿಕಥೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 14:54 IST
Last Updated 7 ಮಾರ್ಚ್ 2024, 14:54 IST
ಪಾವಗಡ ತಾಲ್ಲೂಕಿನ ಕೆಂಚಮ್ಮನಹಳ್ಳಿ ಬಳಿಯ ಚಿತ್ರಲಿಂಗೇಶ್ವರ ವಿಗ್ರಹ
ಪಾವಗಡ ತಾಲ್ಲೂಕಿನ ಕೆಂಚಮ್ಮನಹಳ್ಳಿ ಬಳಿಯ ಚಿತ್ರಲಿಂಗೇಶ್ವರ ವಿಗ್ರಹ    

ಪಾವಗಡ: ತಾಲ್ಲೂಕಿನ ಕೆಂಚಮ್ಮನಹಳ್ಳಿ ಬಳಿಯ ಚಿತ್ರದೇವರ ತೋಪಿನಲ್ಲಿ ಮಾರ್ಚ್ 8ರಂದು ಶಿವರಾತ್ರಿ ಪ್ರಯುಕ್ತ ಚಿತ್ರಲಿಂಗೇಶ್ವರ ಉತ್ಸವ ನಡೆಯಲಿದೆ ಎಂದು ದೇಗುಲ ಸಮಿತಿ ಅಧ್ಯಕ್ಷ ಕೆ.ಟಿ. ಹಳ್ಳಿ ಚಿಕ್ಕಣ್ಣ, ಕಾರ್ಯದರ್ಶಿ ಬಸಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಮರಾಪುರದಿಂದ ಚಿತ್ರದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಪಾಲೇನಹಳ್ಳಿ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗುವುದು. ವಿವಿಧೆಡೆಯಿಂದ ಬರಿಗಾಲಿನಲ್ಲಿ ಬರುವ ಭಾಕ್ತರಿಗೆ ಹಾಲು ಮೀಸಲು ತಂದು ಪೌಳಿಯ ಮೂಲ ಚಿತ್ರದೇವರು, ಉತ್ಸವ ಮೂರ್ತಿಗೆ ಕ್ಷೀರಾಭಿಷೇಕ ಮಾಡಲಿದ್ದಾರೆ. ದೀಪೋತ್ಸವ, ಅಹೋರಾತ್ರಿ ಹರಿಕಥೆ, ಭಜನೆ, ಕೋಲಾಟ ನಡೆಯಲಿದೆ.

ಜನಪದ ಹಾಡುಗಾರ ಮೋಹನ್ ಜುಂಜಪ್ಪ, ಚಿತ್ರದೇವರ ಪದಗಳನ್ನು ಹಾಡಲಿದ್ದಾರೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.