ಕುಣಿಗಲ್: ನಾಡ ಬಂದೂಕಿನಿಂದ ನವಿಲು ಬೇಟೆಯಾಡಿದ ಆರೋಪದ ಮೇರೆಗೆ ಅಮೃತೂರು ಹೋಬಳಿಯ ಸೆಣಬಕೊಪ್ಪಲಿನ ಶ್ರೀನಿವಾಸ್ ಎಂಬುವವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಶ್ರೀನಿವಾಸ್ ತನ್ನ ಮನೆಯ ಹಿಂಬದಿಯ ಜಮೀನಿಗೆ ಬಂದಿದ್ದ ನವಿಲನ್ನು ಸೋಮವಾರ ರಾತ್ರಿ ಬೇಟೆಯಾಡಿದ್ದರು. ಮಂಗಳವಾರ ಬೆಳಿಗ್ಗೆ ಮಾಂಸಾಹಾರ ತಯಾರಿಸುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ವಲಯ ಅರಣ್ಯ ಅಧಿಕಾರಿ ಸ್ಥಳಕ್ಕೆ ಬಂದು ಮಾಂಸ, ನಾಡಬಂದೂಕನ್ನು ವಶಕ್ಕೆ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.