ADVERTISEMENT

ಅರಸು, ಮೊಯ್ಲಿಯವರನ್ನು ತೆಗೆದರು: ಇವರ ಮುಂದೆ ನನ್ನ ಅಧಿಕಾರ ದೊಡ್ಡದಲ್ಲ; ರಾಜಣ್ಣ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 12:49 IST
Last Updated 15 ಆಗಸ್ಟ್ 2025, 12:49 IST
<div class="paragraphs"><p>ಕೆ.ಎನ್. ರಾಜಣ್ಣ</p></div>

ಕೆ.ಎನ್. ರಾಜಣ್ಣ

   

ಮಧುಗಿರಿ: ‘ದೇವರಾಜ ಅರಸು, ವೀರಪ್ಪ ಮೊಯ್ಲಿ ಅವರಂತಹ ಮಹಾನ್ ನಾಯಕರನ್ನೇ ಅಧಿಕಾರದಿಂದ ಕೆಳಗೆ ಇಳಿಸಲಾಗಿದೆ. ಅವರ ಮುಂದೆ ನನ್ನ ಅಧಿಕಾರ ದೊಡ್ಡದಲ್ಲ’ ಎಂದು ಕೆ.ಎನ್.ರಾಜಣ್ಣ ಹೇಳಿದರು.

ಪಟ್ಟಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಬಡವರ ಪರವಾದ ಆಡಳಿತ ನೀಡಿದ ದೇವರಾಜ ಅರಸು ಸರ್ಕಾರ ವಜಾ ಮಾಡಲಾಯಿತು. ಬಡವರ ಮಕ್ಕಳಿಗೆ ಅನುಕೂಲ ಆಗಲೆಂದು ಸಿಇಟಿ ಜಾರಿಗೆ ತಂದ ವೀರಪ್ಪ ಮೊಯ್ಲಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲಾಯಿತು’ ಎಂದರು.

ADVERTISEMENT

‘ಸಚಿವ ಸ್ಥಾನ ಹೋಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಕ್ಷೇಪಿಸುವುದು ಸರಿಯಲ್ಲ. ಅಧಿಕಾರ ಕಳೆದುಕೊಳ್ಳಲು ಹಲವು ಕಾರಣಗಳಿದ್ದು, ಸಮಯ ಬಂದಾಗ ಹೇಳುತ್ತೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.